ಬಳ್ಕೂರು: ಸಿಡಿಲು ಬಡಿದು ಮನೆಗೆ ಹಾನಿ

ಕುಂದಾಪುರ, ಮೇ 20: ಕಳೆದ ರಾತ್ರಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿರುವ ಘಟನೆ ಬಳ್ಕೂರಿನ ಗುಲ್ವಾಡಿ ಕಳುವಿನ ಬಾಗಿಲು ಸಮೀಪ ನಡೆದಿದೆ.
ಗುಲ್ವಾಡಿಯ ಗಿರಿಜಾ ಪೂಜಾರ್ತಿ ಹಕ್ಲು ಎಂಬವರ ಮನೆಗೆ ರಾತ್ರಿ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಟಿವಿ, ಗ್ರೈಂಡರ್, ಎಲೆಕ್ಟ್ರಾನಿಕ್ ಮೋಟಾರ್ ಸಂಪೂರ್ಣ ಹಾನಿಯಾಗಿದ್ದು, ಮನೆ ಗೋಡೆ ಕುಸಿದು ಬಿದ್ದಿದೆ. ಹೆಂಚುಗಳು ಒಡೆದು ಹೋಗಿದ್ದು ಮನೆ ಬಹುತೇಕ ಹಾನಿಗೊಂಡಿದೆ. ಇದರಿಂದ ಸುಮಾರು ಒಂದು ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ.
ಸ್ಥಳಕ್ಕೆ ಬಸ್ರೂರು ತಾಪಂ ಸದಸ್ಯ ರಾಮ್ ಕಿಶನ್ ಹೆಗ್ಡೆ, ಬಳ್ಕೂರು ಗ್ರಾಪಂ ಅಧ್ಯಕ್ಷ ಅಕ್ಷತ್ ಶೇರೆಗಾರ್ ಭೇಟಿ ನೀಡಿ ಸೂ್ತ ಪರಿಹಾರದ ಭರವಸೆ ನೀಡಿದರು.
Next Story





