Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ದುಡ್ಡು...

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ದುಡ್ಡು ಮಾಡುವುದು ಹೇಗೆ ? ಈ ಏಳು ಆ್ಯಪ್‌ಗಳನ್ನೊಮ್ಮೆ ನೋಡಿ....

ವಾರ್ತಾಭಾರತಿವಾರ್ತಾಭಾರತಿ21 May 2018 4:03 PM IST
share
ನಿಮ್ಮ ಸ್ಮಾರ್ಟ್‌ಫೋನ್‌ನಿಂದ ದುಡ್ಡು ಮಾಡುವುದು ಹೇಗೆ ? ಈ ಏಳು ಆ್ಯಪ್‌ಗಳನ್ನೊಮ್ಮೆ ನೋಡಿ....

ನೀವು ಹಣವನ್ನು ಸಂಪಾದಿಸಲು ನೆರವಾಗುವ ಸಾವಿರಾರು ಮಾರ್ಗಗಳಿರಬಹುದು. ಆನ್‌ಲೈನ್‌ನಲ್ಲಿರುವ ಇಂತಹ ಹಲವು ಮಾರ್ಗಗಳು ಕಾನೂನುಬದ್ಧವಾಗಿರಬಹುದು,ಆದರೆ ಎಲ್ಲವೂ ನಿಮಗೆ ಹಣ ಮಾಡಲು ನೆರವಾಗುತ್ತವೆ ಎಂದು ಖಂಡಿತವಾಗಿ ಹೇಳುವಂತಿಲ್ಲ, ಸ್ಮಾರ್ಟ್‌ಫೋನ್ ತಂತ್ರಜ್ಞಾನ ಮುಂದುವರಿದಂತೆ ಅದರ ಮೂಲಕ ಸುಲಭವಾಗಿ ದುಡ್ಡು ಮಾಡುವ ಹಲವಾರು ಮಾರ್ಗಗಳನ್ನು ಜನರು ಕಂಡುಕೊಳ್ಳುತ್ತಿದ್ದಾರೆ. ಈ ಆ್ಯಪ್‌ಗಳು ರಾತ್ರಿ ಬೆಳಗಾಗುವುದರಲ್ಲಿ ನಿಮ್ಮನ್ನು ಲಕ್ಷಾಧೀಶರನ್ನಾಗಿಸುವುದಿಲ್ಲ,ಆದರೆ ನಿಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಮತ್ತು ಉಳಿತಾಯ ಮಾಡಲು ಖಂಡಿತ ನೆರವಾಗುತ್ತವೆ. ಈ ಆ್ಯಪ್‌ಗಳ ಮೂಲಕ ಸಂಪಾದಿಸುವ ಹಣ ನಿಮ್ಮ ಮಾಸಿಕ ಬಿಲ್‌ಗಳ ಪಾವತಿಯನ್ನು ಸುಲಭವಾಗಿಸುತ್ತದೆ. 

ಇಲ್ಲಿದೆ ಈ ಏಳು ಸ್ಮಾರ್ಟ್‌ಫೋನ್ ಆ್ಯಪ್‌ಗಳ ಕುರಿತು ಮಾಹಿತಿ.....

► ಸ್ಕ್ವಾಡ್‌ರನ್(SquadRun)

ಸ್ಕ್ವಾಡ್‌ರನ್ ನೆರವಿನಿಂದ ಅರ್ಥಪೂರ್ಣ ಕಾರ್ಯಗಳನ್ನು ಮಾಡುವ ಮೂಲಕ ನೀವು ಹಣವನ್ನು ಸಂಪಾದಿಸಬಹುದು. ಆ್ಯಪ್‌ನಲ್ಲಿಯ ಕಾರ್ಯಗಳನ್ನು ಮಾಡಲು ನೀವು ಸಮರ್ಥರಿದ್ದೀರಿ ಎನ್ನ್ನುವುದನ್ನು ತೋರಿಸಲು ನೀವು ಟಾಸ್ಕ್‌ವೊಂದನ್ನು ಪೂರ್ಣಗೊಳಿಸುವ ಅಗತ್ಯವಿದೆ. ನೀವು ಈ ಟಾಸ್ಕ್‌ನ್ನು ಎಷ್ಟರ ಮಟ್ಟಿಗೆ ಪೂರ್ಣಗೊಳಿಸಿದ್ದೀರಿ ಎನ್ನ್ನುವುದನ್ನು ಆಧರಿಸಿ ನಿಮ್ಮ ಕೌಶಲ ಮತ್ತು ಅನುಭವಗಳಿಗೆ ಅನುಗುಣವಾದ ಕಾರ್ಯಗಳನ್ನು ನಿಮಗೆ ನೀಡಲಾಗುತ್ತದೆ. ಈ ಕಾರ್ಯಗಳನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ನೇರವಾಗಿ ಹಣದ ಬದಲು ಪಾಯಿಂಟ್‌ಗಳನ್ನು ನೀಡಲಾಗುತ್ತದೆ ಮತ್ತು ಇವುಗಳನ್ನು ನೀವು ನಿಮ್ಮ ಪೇಟಿಎಂ ಖಾತೆಗೆ ವರ್ಗಾಯಿಸಿ ಕೊಳ್ಳಬಹುದು. ಆದರೆ ಇದಕ್ಕಾಗಿ ನಿಮ್ಮ ಗಳಿಕೆಯು 60 ರೂ.ಗಿಂತ ಹೆಚ್ಚಿರಬೇಕಾದ್ದು ಅಗತ್ಯವಾಗಿದೆ.

► ಕ್ರೌನ್‌ಇಟ್(CrownIt)

2014ರಿಂದಲೂ ಅಸ್ತಿತ್ವದಲ್ಲಿರುವ ಕ್ರೌನ್‌ಇಟ್ ಆ್ಯಪ್ ಆನ್‌ಲೈನ್ ಬಳಕೆದಾರರು ರೆಸ್ಟೋರಂಟ್,ಸ್ಪಾಗಳಂತಹ ಆಫ್‌ಲೈನ್ ಉದ್ಯಮಗಳತ್ತ ಹೊರಳುವಂತೆ ಮಾಡುತ್ತದೆ. ಕ್ರೌನ್‌ಇಟ್ ಬಳಕೆದಾರರು ಅದರ ಪಾಲುದಾರ ಉದ್ಯಮಗಳಿಗೆ ಭೇಟಿ ನೀಡಿ ಅಲ್ಲಿಯ ಉತ್ಪನ್ನ/ಸೇವೆಯನ್ನು ಪಡೆದುಕೊಂಡ ಬಿಲ್ ಅನ್ನು ಅಪ್‌ಲೋಡ್ ಮಾಡಿದರೆ ಈ ಆ್ಯಪ್ ಅವರಿಗೆ ಕ್ಯಾಷ್‌ಬ್ಯಾಕ್ ಅನ್ನು ನೀಡುತ್ತದೆ. ಈ ಕ್ಯಾಷ್‌ಬ್ಯಾಕ್ ಮೊತ್ತವನ್ನು ಆನ್‌ಲೈನ್ ಶಾಪಿಂಗ್,ಸಿನಿಮಾ ಟಿಕೆಟ್‌ಗಳು ಮತ್ತು ಟಾಕ್‌ಟೈಮ್ ಇತ್ಯಾದಿಗಳಿಗಾಗಿ ಬಳಸಬಹುದಾಗಿದೆ.

► ಫೋಪ್(FOAP)

 ನೀವು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ತೆಗೆದ ಫೋಟೊಗಳನ್ನು ಮಾರಾಟ ಮಾಡಲು ಈ ಆ್ಯಪ್ ನಿಮಗೆ ನೆರವಾಗುತ್ತದೆ.ಇದಕ್ಕಾಗಿ ನೀವು ಉಚಿತ ಖಾತೆಗೆ ಸೈನ್ ಅಪ್ ಆಗಬೇಕು ಮತ್ತು ನೀವು ತೆಗೆದ ಫೋಟೊಗಳನ್ನು ಫೋಪ್ ಮಾರ್ಕೆಟ್‌ಗೆ ಅಪ್‌ಲೋಡ್ ಮಾಡಬೇಕು. ಈ ಮಾರ್ಕೆಟ್‌ಗೆ ಆಸಕ್ತ ಖರೀದಿದಾರರು ಭೇಟಿ ನೀಡುತ್ತಿರುತ್ತಾರೆ ಮತ್ತು ನಿಮ್ಮ ಫೋಟೊ ಅವರಿಗೆ ಇಷ್ಟವಾದರೆ ಅದನ್ನು ಖರೀದಿಸುತ್ತಾರೆ. ಒಂದು ಫೋಟೊ ಮಾರಾಟವಾದರೆ ನೀವು ಐದು ಡಾಲರ್‌ವರೆಗೆ ಅಂದರೆ 300ರಿಂದ 350 ರೂ.ಗಳನ್ನು ಗಳಿಸಬಹುದಾಗಿದೆ. ನಿಮಗೆ ಹಣವನ್ನು ಪೇಪಾಲ್ ಮೂಲಕ ವರ್ಗಾಯಿಸಲಾಗುತ್ತದೆ ಎನ್ನುವುದು ಗಮನದಲ್ಲಿರಲಿ.

► ಸ್ಲೈಡ್‌ಜಾಯ್(Slidejoy)

ಸ್ಲೈಡ್‌ಜಾಯ್ ಆ್ಯಪ್‌ಗಳ ಮೂಲಕ ಹಣವನ್ನು ಸಂಪಾದಿಸಲು ಇನ್ನೊಂದು ಸರಳ ಮತ್ತು ಉಚಿತ ಮಾರ್ಗವಾಗಿದೆ. ಈ ಆ್ಯಪ್ ನಿಮ್ಮ ಆ್ಯಂಡ್ರಾಯ್ಡಾ ಸ್ಮಾರ್ಟ್‌ಫೋನ್‌ನ ಲಾಕ್‌ಸ್ಕ್ರೀನ್‌ನ ಬದಲು ಪ್ರವರ್ತಿತ ವಿಷಯವನ್ನೊಳಗೊಂಡಿರುವ ಜಾಹೀರಾತನ್ನು ಸ್ಥಾಪಿಸುತ್ತದೆ. ನೀವು ೆನೋಡುವ ಪ್ರತಿಯೊಂದು ಜಾಹೀರಾತಿಗೂ ನೀವು ಕ್ಯಾರಟ್ (Carat)ಗಳನ್ನು ಗಳಿಸುತ್ತೀರಿ. ಪ್ರತಿ 1000 ಕ್ಯಾರಟ್ ಒಂದು ಡಾಲರ್(ಸುಮಾರು 68 ರೂ.) ವೌಲ್ಯವನ್ನು ಹೊಂದಿರುತ್ತದೆ. ನೀವು ಗಳಿಸಿದ ಕ್ಯಾರಟ್‌ಗಳನ್ನು ಪ್ರತಿ 15 ದಿನಗಳಿಗೊಮ್ಮೆ ನಗದು ಹಣಕ್ಕೆ ಪರಿವರ್ತಿಸಿಕೊಳ್ಳಬಹುದು. ಇದಕ್ಕಾಗಿ ನೀವು ಪೇಪಾಲ್ ಖಾತೆಯೊಂದನ್ನು ಹೊಂದಿರಬೇಕಾಗುತ್ತದೆ,ಅಷ್ಟೇ.

► ಎಂಸೆಂಟ್(mCent )

 ಎಂಸೆಂಟ್ ನೀವು ಆ್ಯಪ್‌ಗಳ ಗೊಂಚಲನ್ನು ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಹಣ ಸಂಪಾದನೆಗೆ ಮಾರ್ಗವನ್ನು ಕಲ್ಪಿಸುತ್ತದೆ. ನಿಮಗೆ ಪಾಯಿಂಟ್‌ಗಳನ್ನು ಪುರಸ್ಕಾರವಾಗಿ ನೀಡಲಾಗುತ್ತದೆ ಮತ್ತು ಈ ಪಾಯಿಂಟ್‌ಗಳನ್ನು ನೀವು ನಿಮ್ಮ ಮೊಬೈಲ್ ಪ್ರಿಪೇಡ್ ರಿಚಾರ್ಜ್‌ನಂತಹ ಸೇವೆಗಳನ್ನು ಪಡೆದುಕೊಳ್ಳಲು ಬಳಸಬಹುದು. ಇಲ್ಲಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಮಾತ್ರವಲ್ಲ,ವೀಡಿಯೊ ಫಾರ್ಮಾಟ್‌ನಲ್ಲಿ ನೀವು ನೋಡುವ ಪ್ರತಿ ಜಾಹೀರಾತಿಗೂ ಹಣವನ್ನು ಸಂಪಾದಿಸಬಹುದು. ನಿಮಗೆ ನಿಜಕ್ಕೂ ಹೆಚ್ಚಿನ ಹಣವನ್ನು ಗಳಿಸಬೇಕೆಂದಿದ್ದರೆ ನೀವು ಈ ಆ್ಯಪ್‌ನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸಲು ಹೆಚ್ಚು ಜನರನ್ನು ಆಹ್ವಾನಿಸಬಹುದು.

► ಕೀಟೂ(Keettoo)

ಕೀಟೂ ನೀವು ಹಣವನ್ನು ಗಳಿಸಬಹುದಾದ ಇನ್ನೊಂದು ಆ್ಯಪ್ ಆಗಿದೆ. ಅದು ನಿಮ್ಮ ಸ್ಮಾರ್ಟ್‌ಪೋನ್‌ನ ಕೀ ಬೋರ್ಡ್‌ನ್ನು ವಿವಿಧ ಬ್ರಾಂಡ್‌ಗಳಿಗಾಗಿ ನಿಗದಿತ ವೇದಿಕೆಯೊಂದಿಗೆ ಜೋಡಿಸುತ್ತದೆ. ಇನಸ್ಟಾಲ್ ಮಾಡಿಕೊಂಡ ಈ ಆ್ಯಪ್ ನಿಮಗೆ ನೋಟಿಫಿಕೇಷನ್ ರವಾನಿಸುತ್ತದೆ. ಹಣವನ್ನು ಗಳಿಸಲು ನೀವು ಜಾಹೀರಾತನ್ನು ವೀಕ್ಷಿಸಬೇಕಾಗುತ್ತದೆ. ನೀವು ವೀಕ್ಷಿಸುವ ಪ್ರತಿಯೊಂದು ಜಾಹೀರಾತಿಗೂ ಒಂದು ರೂ.ನಿಮ್ಮ ಕೀಟೂ ಖಾತೆಗೆ ಜಮೆಯಾಗುತ್ತದೆ. ಕೀಟೂವನ್ನು ನಿಮ್ಮ ಪೇಟಿಎಂ ಮತ್ತು ಮೊಬಿವಿಕ್ ವ್ಯಾಲೆಟ್‌ಗಳೊಂದಿಗೂ ಜೋಡಿಸಬಹುದಾಗಿದೆ. ನೀವು ಈ ವ್ಯಾಲೆಟ್‌ಗಳ ಮೂಲಕ ನಿಮ್ಮ ಗಳಿಕೆಯನ್ನು ನಗದು ಹಣಕ್ಕೆ ಪರಿವರ್ತಿಸಿಕೊಳ್ಳಬಹುದು.

►ಯಮ್‌ಚೆಕ್( Yumchek)

 ನೀವು ಭೇಟಿ ನೀಡಿದ ರೆಸ್ಟೋರಂಟ್‌ಗಳ ಬಿಲ್‌ಗಳನ್ನು ಯಮ್‌ಚೆಕ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ನೀವು ಊಟದ ಬಿಲ್ ಅನ್ನು ಅಪ್‌ಲೋಡ್ ಮಾಡಿದರೆ ಐದು ರೂ.ನಿಮ್ಮ ವ್ಯಾಲೆಟ್‌ನ್ನು ಸೇರುತ್ತದೆ. ಈ ಆ್ಯಪ್ ಐಒಎಸ್ ಮತ್ತು ಆ್ಯಂಡ್ರಾಯ್ಡಾ ಎರಡಕ್ಕೂ ಲಭ್ಯವಿದೆ. ಇದು ಸರ್ಚ್ ಫಂಕ್ಷನ್ ಎಂಬ ಇನ್ನೊಂದು ವೈಶಿಷ್ಟವನ್ನು ಹೊಂದಿದ್ದು,ನಿಮಗೆ ಸಮೀಪದಲ್ಲಿರುವ ರೆಸ್ಟೋರಂಟ್‌ಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X