ದೂರದರ್ಶನ ದಕ್ಷಿಣ ವಲಯ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಬಿ ಪ್ರಕಾಶ ದೇವಾಡಿಗರಿಂದ ಸ್ಯಾಕ್ಸೋಫೋನ್ ವಾದನ
ಬೆಳ್ತಂಗಡಿ,ಮೇ 22 : ದೂರದರ್ಶನ ಪ್ರಸ್ತುತಪಡಿಸುವ ದಕ್ಷಿಣವಲಯ ವಿಶೇಷ "ನಾದ ಸಂಗಮ" ಸಂಗೀತ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಇವರ ಸ್ಯಾಕ್ಸೋಫೋನ್ ವಾದನವು ಮೇ 26 ರಂದು (ಶನಿವಾರ) ಬೆಳಿಗ್ಗೆ 9 ರಿಂದ 10 ರವರೆಗೆ ಬೆಂಗಳೂರು ದೂರದರ್ಶನ ಕೇಂದ್ರ ಸೇರಿದಂತೆ ದಕ್ಷಿಣ ಭಾರತದ ಒಟ್ಟು 5 ರಾಜ್ಯಗಳ ದೂರದರ್ಶನ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ.
ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿರುವ ದೇವಾಡಿಗರು ರಾಜ್ಯದಲ್ಲೇ 2 ನೇಯ ಕಲಾವಿದರಾಗಿದ್ದು, ಈ ವಿಶೇಷ ಕಾರ್ಯಕ್ರಮ ನೀಡುವುದರಲ್ಲಿಯೂ ಕದ್ರಿ ಗೋಪಾಲನಾಥರ ನಂತರದ 2 ನೇಯ ಸ್ಯಾಕ್ಸೋಫೋನ್ ಕಲಾವಿದರಾಗಿದ್ದಾರೆ. ಇವರೊಂದಿಗೆ ಪಕ್ಕ ವಾದ್ಯದಲ್ಲಿ ವಾಯೋಲಿನ್ ರಾಜೇಶ್ ಬೆಂಗಳೂರು, ಮೃದಂಗ ಪ್ರಶಾಂತ್ ಬೆಂಗಳೂರು, ಘಟಂ ರವಿ ಕುಮಾರ್ ಬೆಂಗಳೂರು, ಮೋರ್ಸಿಂಗ್ ಲಕ್ಷ್ಮೀ ನಾರಾಯಣ ಬೆಂಗಳೂರು ಸಹಕರಿಸಿದ್ದಾರೆ.
Next Story





