ರೋಟರಿ ಜಿಲ್ಲಾ ಪ್ರಶಸ್ತಿ 'ಪುರಸ್ಕಾರ್-2018' ಪ್ರದಾನ ಸಮಾರಂಭ
ಮೂಡುಬಿದಿರೆ ಕ್ಲಬ್‍ಗೆ 29 ಪ್ರಶಸ್ತಿಗಳೊಂದಿಗೆ ಸಮಗ್ರ ಪುರಸ್ಕಾರ

ಮೂಡುಬಿದಿರೆ, ಮೇ.22: ರೋಟರಿ ಜಿಲ್ಲೆ 3181ರ ಜಿಲ್ಲಾ ಸಚಿವಾಲಯದ ವತಿಯಿಂದ ಸುವರ್ಣ ಮಹೋತ್ಸವ ವರ್ಷದಲ್ಲಿರುವ ಮೂಡುಬಿದಿರೆ ರೋಟರಿ ಕ್ಲಬ್ ಆತಿಥೇಯತ್ವದಲ್ಲಿ ಇಲ್ಲಿನ ನಿಶ್ಮಿತಾ ಪ್ಯಾರಡೈಸ್ ಸಭಾಂಗಣದಲ್ಲಿ ಜರಗಿದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ "ಪುರಸ್ಕಾರ್-2018"ರಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ 22 ಪ್ರಥಮ, 2 ದ್ವಿತೀಯ, 5 ತೃತೀಯ ಪುರಸ್ಕಾರಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ರೋಟರಿ ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚೆಂಗಪ್ಪ, ಎಸಿಸ್ಟೆಂಟ್ ಗವರ್ನರ್ ಎ.ಎಂ.ಕುಮಾರ್, ಜಿಲ್ಲಾ ಪ್ರಶಸ್ತಿ ಸಮಿತಿ ಸಂಘಟನಾ ಅಧ್ಯಕ್ಷ ಜಯರಾಮ್ ಕೋಟ್ಯಾನ್., ಉಪಾಧ್ಯಕ್ಷ ಐಸಾಕ್ ವಾಸ್ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುವರ್ಣ ಸಂಭ್ರಮದಲ್ಲಿರುವ ಮೂಡುಬಿದಿರೆ ಕ್ಲಬ್‍ಗೆ ನೀಡಲಾದ ಸಮಗ್ರ ಪ್ರಶಸ್ತಿಯನ್ನು ಸ್ಥಾಪಕ ಸದಸ್ಯ ಡಾ. ರತ್ನಾಕರ ಶೆಟ್ಟಿ ಹಿರಿತನದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್ , ಕಾರ್ಯದರ್ಶಿ ಮಹಮ್ಮದ್ ಆರಿಫ್, ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಹರೀಶ್ ನಾಯಕ್, ಕಾರ್ಯದರ್ಶಿ ಡಾ.ಮುರಳಿ ಕೃಷ್ಣ ಆರ್.ವಿ ಎವಾರ್ಡ್ ಕಮಿಟಿ ಚೇರ್‍ಮನ್ ಸುರೇಶ್ ಜೈನ್, ಸೇರಿದಂತೆ ಕ್ಲಬ್‍ನ ಸದಸ್ಯರು ಜತೆಗೂಡಿ ಗೌರವ ಸ್ವೀಕರಿಸಿದರು.
ಪುರಸ್ಕಾರಗಳು: ಕ್ಲಬ್ ಸೇವೆಯಲ್ಲಿ ಬೆಸ್ಟ್ ಕ್ಲಬ್, ಹಾಜರಾತಿ, ಸಾರ್ವಜನಿಕ ಸಂಪರ್ಕ, ಫೆಲೋಶಿಪ್, ಹಣಕಾಸು ನಿರ್ವಹಣೆ, , ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ, ವೃತ್ತಿ ಸೇವೆಯಲ್ಲಿ ವೃತ್ತಿ ಗೌರವ ಪ್ರಶಸ್ತಿಗಳು, ವೃತ್ತಿ ಮಾರ್ಗದರ್ಶನ, ಸಮುದಾಯ ಸೇವೆಯಲ್ಲಿ ಬೆಸ್ಟ್ ಕ್ಲಬ್, ರೋಟರಿ ಸಮುದಾಯ ದಳದ ಸೇವೆ, ಸ್ವಚ್ಛ ಅಭಿಯಾನ,ರೋಗ ತಡೆ ಮತ್ತು ನಿವಾರಣೆ, ಜಲ ಮತ್ತು ವಸತಿ ಶುಚಿತ್ವ, ಮೂಲ ಶಿಕ್ಷಣ ಮತ್ತು ಸಾಕ್ಷರತೆ, ಅಂತರಾಷ್ಟ್ರೀಯ ಸೇವೆಯಲ್ಲಿ ಬೆಸ್ಟ್ ಕ್ಲಬ್, ಸ್ನೇಹ ವಿನಿಮಯ, ರೋಟರಿ ಫೌಂಡೇಶನ್, ಯುವ ಜನ ಸೇವೆಯಲ್ಲಿ ಬೆಸ್ಟ್ ಕ್ಲಬ್, ಇಂಟರ್ಯಾಕ್ಟ್, ರೋಟರ್ಯಾಕ್ಟ್‍ನಲ್ಲಿ ಪ್ರಥಮ ಹೀಗೆ ಒಟ್ಟು 22 ಪ್ರಥಮ ಪ್ರಶಸ್ತಿಗಳು, ಕ್ಲಬ್ ಸೇವೆಯಲ್ಲಿ ರೋಟರಿ ಮಾಹಿತಿ, ಸಮುದಾಯ ಸೇವೆಯಲ್ಲಿ ಆರ್ಥಿಕ ಮತ್ತು ಸಮುದಾಯಿಕ ಅಭಿವೃದ್ಧಿಯಲ್ಲಿ ದ್ವಿತೀಯ ಪ್ರಶಸ್ತಿ ರೋಟರಿ ಮತ್ತು ಸೇವೆಯಲ್ಲಿ ಪಾಲುದಾರಿಕೆ,ವೃತ್ತಿಪರ ಸೇವೆಯಲ್ಲಿ ವೃತ್ತಿ ಮಾಹಿತಿ ಜಾಗೃತಿ,ಪರಿಸರ ಮತ್ತು ಜಲ ಸಂರಕ್ಷಣೆ, ಸಮುದಾಯ ಸೇವೆಯಲ್ಲಿ ಶಾಂತಿ ಮತ್ತು ಸಂಘರ್ಘ ನಿಯಂತ್ರಣಾ ನಿರ್ಣಯಗಳು,ಅಂತಾರಾಷ್ಟ್ರೀಯ ಸೇವೆಯಲ್ಲಿ ಜಿಲ್ಲಾ ಅನುದಾನದಲ್ಲಿ ತೃತೀಯ ಪುರಸ್ಕಾರವನ್ನು ಮೂಡುಬಿದಿರೆ ರೋಟರಿ ಗೆದ್ದುಕೊಂಡಿದೆ.







