Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ : ಜಿಲ್ಲೆಯಾದ್ಯಂತ ಗಾಳಿ, ಮಳೆಗೆ...

ಉಡುಪಿ : ಜಿಲ್ಲೆಯಾದ್ಯಂತ ಗಾಳಿ, ಮಳೆಗೆ ಭಾರೀ ಪ್ರಮಾಣದ ಹಾನಿ

ಸಿಡಿಲು ಬಡಿದು ಬಾಲಕ,ಮಹಿಳೆಗೆ ಗಾಯ

ವಾರ್ತಾಭಾರತಿವಾರ್ತಾಭಾರತಿ22 May 2018 8:48 PM IST
share
ಉಡುಪಿ : ಜಿಲ್ಲೆಯಾದ್ಯಂತ ಗಾಳಿ, ಮಳೆಗೆ ಭಾರೀ ಪ್ರಮಾಣದ ಹಾನಿ

►ಸಾವಿರಾರು ಬಾಳೆಗಿಡ, ತೋಟ ಧರಾಶಾಹಿ

ಉಡುಪಿ, ಮೇ 22: ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳನ್ನು ಹೊರತು ಪಡಿಸಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ ತಾಲೂಕಿನಾದ್ಯಂತ ಇಂದು ಬೆಳಗಿನ ಜಾವ ಬೀಸಿದ ಭಾರೀ ಗಾಳಿ-ಮಳೆ ಹಾಗೂ ಸಿಡಿಲಿಗೆ ಅಪಾರ ಪ್ರಮಾಣದ ಹಾನಿಯಾದ ಬಗ್ಗೆ ವರದಿಗಳು ಬಂದಿವೆ.

ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಪ್ರಾರಂಭಗೊಂಡು ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಬೀಸಿದ ಬಿರುಗಾಳಿಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹತ್ತಾರು ಎಕರೆ ತೋಟದಲ್ಲಿ ಬೆಳೆಸಲಾಗಿದ್ದ ಸಾವಿರಾರು ಬಾಳೆಗಿಡ ಹಾಗೂ ಇತರ ಗಿಡಗಳು ಧರಾಶಾಹಿಯಾಗಿದ್ದರೆ, ನಾಲ್ಕೈದು ಮನೆಗಳಿಗೆ ಬಡಿದ ಸಿಡಿಲಿನಿಂದ ಹೆರ್ಗ ಗ್ರಾಮದ ಮನೆಯಲ್ಲಿ ಮಹಿಳೆ, ಮಣಿಪುರ ಗ್ರಾಪಂನ ಕೊಡಂಗಳದ ಬಾಲಕ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ ಬ್ರಹ್ಮಾವರ ಕರ್ಜೆ ಗ್ರಾಪಂ ವ್ಯಾಪ್ತಿಯ ಹಲುವಳ್ಳಿಯಲ್ಲಿ ಒಂದು ದನ ಮತ್ತು ನಾಯಿ ಸಾವನ್ನಪ್ಪಿದೆ.

ಅರಬ್ಬಿಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕರಾವಳಿ ಯೆಲ್ಲೆಡೆ ಸೋಮವಾರ ತಡರಾತ್ರಿಯಿಂದ ಆರಂಭಗೊಂಡು, ಮಂಗಳವಾರ ಬೆಳಗ್ಗಿನ ಜಾವದವರೆಗೆ ಭಾರೀ ಗಾಳಿ, ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ಮನೆಗಳ ಮೇಲೆ ಮರಗಳು ಬಿದ್ದು ಲಕ್ಷಾಂತರ ರೂ. ಹಾನಿಯಾಗಿದೆ.

ಕುಂದಾಪುರ: ತಾಲೂಕು ಕಚೇರಿಗೆ ಬಂದಿರುವ ಮಾಹಿತಿಗಳಂತೆ ಕುಂದಾಪುರ ಕಸಬಾದ ಕೋಡಿಯ ಸೋನ್ಸ್ ಶಾಲೆಯ ಹತ್ತಿರ ರಾಮ ಎಂಬವರ ಪುತ್ರ ಶ್ಯಾಮ ಅವರ ಮನೆಗೆ ತೆಂಗಿನ ಮರ ಬಿದ್ದು, ಮನೆಗೆ ಭಾಗಶಃ ಹಾನಿಯಾಗಿದ್ದು, ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ. ಯಡ್ಯಾಡಿ-ಮತ್ಯಾಡಿಯಲ್ಲಿ ಜಲಜಾ ಶೆಡ್ತಿ ಅವರ ಮನೆಯ ಸಿಮೆಂಟಿನ ಮೇಲ್ಚಾವಣಿ ಬೀಸಿದ ಭಾರೀ ಗಾಳಿಗೆ ಹಾರಿಹೋಗಿದ್ದು, ಅಂದಾಜು 25 ಸಾವಿರ ರೂ. ಹಾನಿಯಾಗಿದೆ.

ಗೋಪಾಡಿಯ ಜಯ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 8,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಮೊಳಹಳ್ಳಿ ಯಲ್ಲಿ ರುಕ್ಕು ಅವರ ಮನೆ ಮೇಲೆ ಮರ ಬಿದ್ದು, ಸುಮಾರು 25 ಸಾವಿರ ರೂ., ರಘುರಾಮ ಕಾಂಚನ್ ಅವರ ಮನೆಗೆ ಮರ ಬಿದ್ದು, ಸುಮಾು 10 ಸಾವಿರ ರೂ. ನಷ್ಟ ಉಂಟಾಗಿದೆ.

ಬೀಜಾಡಿಯಲ್ಲೂ ಹಾನಿ: ಮಂಗಳವಾರ ಬೆಳಗ್ಗಿನ ಜಾವ ಸುರಿದ ಭಾರೀ ಗಾಳಿ-ಮಳೆಗೆ ಬೀಜಾಡಿ ಪರಿಸರದ ಹಲವು ಮನೆಗಳಿಗೆ ಹಾನಿಯಾಗಿದ್ದು, ಶ್ರೀನಿವಾಸ ಗಾಣಿಗ ಅವರ ಮನೆಯ ಸಮೀಪದ ಬಾವಿಯ ಒಂದು ಭಾಗದ ಮಣ್ಣು ಜರಿದು ಅಂದಾಜು 10 ಸಾವಿರ ರೂ., ಜ್ಯೋತಿ ಪೂಜಾರಿ ಅವರ ಮನೆಗೆ ಹಾನಿಯಾಗಿ 8 ಸಾವಿರ ರೂ., ಚಂದು ಅವರ ಮನೆ ಮೇಲೆ ಮರ ಬಿದ್ದು ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ. ಕೊಲ್ಲೂರಿನಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಸುಮಾರು 80 ಸಾವಿರ ರೂ. ನಷ್ಟ ಉಂಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಂದೂರು ತಾಲೂಕು: ನಾವುಂದ ಗ್ರಾಮದ ಕುದ್ರುಕೋಡಿನ ರವಿರಾಜ ಶೆಟ್ಟಿ ಅವರ ಮನೆಯ ಮೇಲ್ಚಾವಣಿ ಗಾಳಿ-ಮಳೆಗೆ ಹಾರಿಹೋಗಿದ್ದು, ನೀರಿನ ಟ್ಯಾಂಕ್ ಸಹ ಹಾನಿಗೊಂಡಿದೆ. ಇದರಿಂದ ಸುಮಾರು 35,000ರೂ.ನಷ್ಟ ಉಂಟಾಗಿದೆ. ಅದೇ ಗ್ರಾಮದ ಸಂಜೀವ ಶೆಟ್ಟಿ ಅವರ ಮನೆಯ ಮರ ಬಿದ್ದು ಛಾವಣಿ ಹಾನಿಗೊಂಡಿದ್ದು 24,000ರೂ. ನಷ್ಟ, ಯಡ್ತರೆಯ ನಾಗೇಶ್ ಭಂಡಾರಿ ಅವರ ಮನೆಯ ತಗಡು ಹಾರಿಹೋಗಿ 15,000ರೂ. ನಷ್ಚ ಉಂಟಾದ ಬಗ್ಗೆ ವರದಿಗಳು ಬಂದಿವೆ.

ಇನ್ನು ಮುಧೂರು ಉದಯನಗರದ ಕುಟ್ಟಪ್ಪನ್ ಎಂಬವರ ಮನೆಯ ಮೇಲೆ ಮರಬಿದ್ದು 80,000ರೂ. ನಷ್ಟವಾಗಿದ್ದರೆ, ಕೊಲ್ಲೂರಿನ ನಾಗವೇಣಿ ಎಂಬವರ ಮನೆಯ ಮೇಲೆ ಮರಬಿದ್ದು 1,000ರೂ.ನಷ್ಟವಾಗಿದೆ.ಜಡ್ಕಲ್ ಗ್ರಾಮದ ಸಳ್ಕೋಡ ಗೋಳಿಗುಡ್ಡಿಯ ಸರ್ವಶ್ರೀ ಪೂಜಾರ್ತಿ ಎಂಬವರ ಹೊಸ ಮನೆಯ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿದ್ದು 5000ರೂ. ನಷ್ಟವಾಗಿದೆ.

ಹಿರಿಯಡ್ಕ ಸಮೀಪದ ಹಿರೇಬೆಟ್ಟು ಗ್ರಾಮದ ಜಗನ್ನಾಥ ಶೆಟ್ಟಿ ಇವರ ವಾಸದ ಪಕ್ಕಾ ಮನೆಯ ಮೇಲೆ ಇಂದು ಬೆಳಗಿನ ಜಾವ ಭಾರಿ ಮರ ಬಿದ್ದು ಭಾಗಶ: ಹಾನಿಯಾಗಿದ್ದು, ಸುಮಾರು 50,000ರೂ.ನಷ್ಟವಾಗಿದೆ.

ಗಾಳಿಗೆ ನೆಲಕಚ್ಚಿದ ಸಾವಿರಾರು ಬಾಳೆಗಿಡಗಳು

ನಿನ್ನೆ ರಾತ್ರಿ ಬೀಸಿದ ಭಾರೀ ಗಾಳಿಗೆ ಅನೇಕ ಕಡೆಗಳಲ್ಲಿ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕುಂದಾಪುರ ತಾಲೂಕು ಹಾರ್ದಳ್ಳಿ-ಮಂಡಳ್ಳಿಯ ಮಂಜು ಮಡಿವಾಳ ಎಂಬವರ ಬಾಳೆ ಗಿಡಗಳ ಸಹಿತ ಇಡೀ ತೋಟ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು 80,000ರೂ.ಗಳಿಗೂ ಅಧಿಕ ನಷ್ಟವಾದ ಬಗ್ಗೆ ವರದಿಗಳು ಬಂದಿವೆ.

ಬೈಂದೂರಿನ ರಮಾನಂದ ಶೇರಿಗಾರ್ ಎಂಬವರ ಸುಮಾರು ಒಂದು ಎಕರೆ ತೋಟದಲ್ಲಿದ್ದ 500ಕ್ಕೂ ಅಧಿಕ ಬಾಳೆಗಿಡಗಳು ಬಿರುಗಾಳಿಗೆ ಸಂಪೂರ್ಣ ಧರಾಶಾಹಿಯಾಗಿದ್ದು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜಿದೆ. ಅದೇ ರೀತಿ ತೆಗ್ಗರ್ಸೆಯ ಶ್ರೀಧರ ಗಾಣಿಗ ಅವರ ತೋಟದಲ್ಲಿದ್ದ 200ಕ್ಕೂ ಅಧಿಕ ಬಾಳೆಗಿಡಗಳು ಸಂಪೂರ್ಣ ಹಾನಿಗೊಂಡಿದ್ದು ಒಂದು ಲಕ್ಷ ರೂ. ನಷ್ಟವಾಗಿದೆ. ಬೈಂದೂರು ಕಲ್ಮಕ್ಕಿಯ ಹರಿದಾಸ ಅವರ ತೋಟದ ಬಾಳೆಗಿಡಗಳೂ ಗಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಮಳೆ ವಿವರ

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಉಡುಪಿಯಲ್ಲಿ 28.9ಮಿ.ಮೀ., ಕುಂದಾಪುರದಲ್ಲಿ 15.5ಮಿ.ಮೀ. ಹಾಗೂ ಕಾರ್ಕಳದಲ್ಲಿ 6.7ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಸಿಡಿಲು ಬಡಿದು ಮಹಿಳೆ, ಬಾಲಕನಿಗೆ ಗಾಯ

ಗಾಳಿ-ಮಳೆಯೊಂದಿಗೆ ಸಿಡಿಲು ಸಹ ತನ್ನ ಪ್ರತಾಪ ತೋರಿಸಿದ್ದು, ನಾನಾ ಕಡೆಗಳಲ್ಲಿ ಒಬ್ಬ ಮಹಿಳೆ ಹಾಗೂ ಬಾಲಕ ಸಿಡಿಲಿನ ಹೊಡೆತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ, ಒಂದು ದನ ಹಾಗೂ ನಾಯಿ ಅದಕ್ಕೆ ಬಲಿಯಾಗಿದೆ.

ಹೆರ್ಗ ಹೊಳೆಬಾಗಿಲು ಸಮೀಪ ಕಲ್ಲಗುಡ್ಡೆಯಲ್ಲಿ ಅಪ್ಪಿಶೇರಿಗಾರ್ತಿ ಎಂಬವರ ಮಗಳು ಸುಗಂಧಿ ಶೇರಿಗಾರ್ತಿ (35) ಕುತ್ತಿಗೆ ಹಾಗೂ ಬೆನ್ನ ಹಿಂದೆ ತೀವ್ರತರದ ಸಿಡಿಲಿನಿಂದ ಸುಟ್ಟಗಾಯದೊಂದಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ ವೇಳೆಗೆ ಮನೆಯ ಪಡಸಾಲೆಯಲ್ಲಿ ಮಲಗಿದ್ದ ಸುಗಂಧಿ ಶೇರಿಗಾರ್ತಿ, ಪಕ್ಕದಲ್ಲಿ ಮಲಗಿದ್ದ ತಂಗಿ ಸುಕನ್ಯ ಶೇರಿಗಾರ್ತಿ, ಕೃಷ್ಣ ಶೇರಿಗಾರರಿಗೂ ಸಿಡಿಲೆರಗಿರುವುದರಿಂದ ಪ್ರಜ್ಞೆ ತಪ್ಪಿದ್ದಾರೆ.

ಗಾಯಗೊಂಡ ಸುಗಂಧಿ ಶೇರಿಗಾರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೀಗ ಚೇತರಿಸಿಕೊಳ್ಳುತಿದ್ದಾರೆ. ಸುಗಂಧಿ ಶೇರಿಗಾರ್ ಧರಿಸಿದ್ದ ಚಿನ್ನದ ಸರ ಸುಟ್ಟು ಕರಕಲಾಗಿದೆ. ಅವರು ಬಳಸಿದ ಹೊದಿಕೆ ಬಟ್ಟೆ ಸುಟ್ಟಿದ್ದು ಮನೆಯ ಚಾವಡಿ ಗೋಡೆಯ ಕನ್ನಡಿ, ಪಡಸಾಲೆಯ ನೆಲ ಒಡೆದು ಹೋಗಿದ್ದು ಗೋಡೆ ಕೂಡ ಬಿರುಕುಬಿಟ್ಟಿದೆ. ಮನೆಯ ಸುತ್ತ ವಿದ್ಯುತ್ ವಯರಿಂಗ್ ಸುಟ್ಟು ಕರಕಲಾಗಿದ್ದು, ಮನೆಗೆ ಹಾನಿಯಾಗಿದೆ.

ಒಂದು ವಾರದ ಹಿಂದೆ ಹೆರ್ಗದ ದೇವಸ್ಥಾನದ ಸಮೀಪದಎಮಿಡಾ ಡಿಸೋಜ ಅವರ ಫಲಭರಿತ ತೆಂಗಿನ ಮರ ಹಾಗೂ ಅಚ್ಚುತ ನಗರ ದಿ. ಸುಂದರ ರೈ ಅವರ ಮನೆಯ ಫಲಭರಿತ ತೆಂಗಿನಮರಕ್ಕೆ ತೀವ್ರತರಹದ ಹಾನಿಯಾಗಿ ಮರ ಸುಟ್ಟು ಹೋಗಿತ್ತು.

ಮಣಿಪುರ ಗ್ರಾಪಂ ವ್ಯಾಪ್ತಿಯ ಕೊಡಂಗಳದ ಸದಾನಂದ ನಾಯಕ್ ಅವರ ಮನೆಗೆ ಬೆಳಗಿನ ಜಾವ ಸಿಡಿಲು ಬಡಿದು ಅಪಾರ ನಷ್ಟವಾಗಿದ್ದು, ಅವರ ಪುತ್ರ ಸಂದೇಶ (14) ಸಿಡಿಲಿನಿಂದ ಗಾಯಗೊಂಡು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.

ಕುಂದಾಪುರ ತಾಲೂಕಿನ ವಕ್ವಾಡಿಯ ದಿನೇಶ್ ಶೆಟ್ಟಿ ಎಂಬವರ ವಾಸದ ಮನೆಯ ಮೇಲೆ ಮದ್ಯರಾತ್ರಿಯ ವೇಳೆ ಸಿಡಿಲು ಬಡಿದು ಮನೆಯ ವಿದ್ಯುತ್ ಸಲಕರಣೆ, ಇಲೆಕ್ಟ್ರಾನಿಕ್ಸ್ ಸಲಕರಣೆಗಳೆಲ್ಲವೂ ಸಂಪೂರ್ಣ ಹಾನಿಗೊಳಗಾಗಿವೆ.

ದನ-ನಾಯಿ ಸಾವು: ಬ್ರಹ್ಮಾವರ ಸಮೀಪದ ಕರ್ಜೆ ಗ್ರಾಪಂ ವ್ಯಾಪ್ತಿಯ ಹಲುವಳ್ಳಿಯ ಭಾಸ್ಕರ ಶೆಟ್ಟಿ ಎಂಬವರ ವಾಸದ ಮನೆ ಹಾಗೂ ಹಟ್ಟಿಯ ಮೇಲೆ ಇಂದು ಬೆಳಗಿನ ಜಾವ ಮೂರು ಗಂಟೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ಸಂಪರ್ಕ ಹಾಗೂ ಉಪಕರಣಗಳು ಸಂಪೂರ್ಣ ಹಾನಿಗೊಂಡಿವೆ. ಅಲ್ಲದೇ ಹಟ್ಟಿಯಲ್ಲಿದ್ದ ಒಂದು ದನ ಹಾಗೂ ಮನೆಯ ನಾಯಿ ಸಿಡಿಲಿಗೆ ಬಲಿಯಾಗಿವೆ. ಇದರಿಂದ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸುದ್ದಿ ತಿಳಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಭಾಸ್ಕರ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸರಕಾರದಿಂದ ಸಾಧ್ಯವಿದ್ದ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X