ತೊಕ್ಕೊಟ್ಟು: ಪಾರ್ಕ್ ಮಾಡಿದ್ದ ಬುಲೆಟ್ ಬೈಕ್ ಕಳವು
ಮಂಗಳೂರು, ಮೇ 22: ತೊಕ್ಕೊಟ್ಟು ಸಿಟಿ ಮಾರ್ಕೆಟ್ ಬಳಿ ಪಾರ್ಕ್ ಮಾಡಲಾಗಿದ್ದ ಬುಲೆಟ್ ಬೈಕನ್ನು ಯಾರೋ ಕಳವು ಮಾಡಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶಾಬಿನ್ ಅಬ್ಬಾಸ್ ಎಂಬವರು ಮೇ 19ರಂದು ರಾತ್ರಿ 9 ಗಂಟೆಗೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಸಿಟಿ ಮಾರ್ಕೆಟ್ ಬಳಿ ಬುಲೆಟ್ ಬೈಕ್ ಪಾರ್ಕ್ ಮಾಡಿದ್ದರು. ಮಾರನೆ ದಿನ ಬೆಳಗ್ಗೆ ಬಂದು ನೋಡಿದಾಗ ಪಾರ್ಕ್ ಮಾಡಲಾಗಿದ್ದ ಸ್ಥಳದಲ್ಲಿ ಬುಲೆಟ್ ಬೈಕ್ ಇರಲಿಲ್ಲ. ಬಳಿಕ ಎಲ್ಲಾ ಹುಡುಕಿದ್ದು, ಪತ್ತೆಯಾಗದಿರುವುದರಿಂದ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Next Story





