ಬೆಂಗಳೂರು: ಎಸಿಬಿ ಬಲೆಗೆ ಬಿದ್ದ ಲೇಬರ್ ಎಸ್ಸೈ

ಬೆಂಗಳೂರು, ಮೇ 22: ಐಸ್‌ಕ್ರೀಂ ಪಾರ್ಲರ್‌ನ ಮಾಲಕ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಲೇಬರ್ ಇನ್ಸ್‌ಪೆಕ್ಟರ್ ಒಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.
ನಗರದ ವೃತ್ತ 12ನೇ ಘಟಕದ ಹಿರಿಯ ಲೇಬರ್ ಎಸ್ಸೈ ಮಂಜುನಾಥ್ ಎಂಬುವರ ವಿರುದ್ಧ ಎಸಿಬಿ ಪ್ರಕರಣ ದಾಖಲು ಮಾಡಿದೆ.
ವಿಜಯನಗರ ಎಂ.ಸಿ.ಲೇಔಟ್‌ನಲ್ಲಿ ಐಸ್ ಕ್ರೀಂ ಪಾರ್ಲರ್ ನಡೆಸುತ್ತಿದ್ದು, ಸದರಿ ಪಾರ್ಲರ್‌ನಲ್ಲಿ 6 ಜನ ಕೆಲಸಗಾರರಿದ್ದು, ಇವರಿಗೆ ಸಂಬಂಧಪಟ್ಟಂತೆ ಕಡತಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ ಎಂದು ನೆಪ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಈ ಸಂಬಂಧ ಖಾಸಗಿ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಸಿಬಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





