ಬೃಹತ್ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ, ಸ್ಫೋಟಕ ವಶ

ಇಂಫಾಲ, ಮೇ 22: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿ ಹಾಗೂ ಸ್ಫೋಟಕಗಳನ್ನು ಸೇನೆ ಮಂಗಳವಾರ ವಶಪಡಿಸಿಕೊಂಡಿದೆ.
6 ಅಸ್ಸಾಂ ರೈಫಲ್ಸ್ ಹಾಗೂ 27 ಅಸ್ಸಾಂ ರೈಫಲ್ಸ್ ಸೋಮವಾರ ಜಂಟಿಯಾಗಿ ಕಾರ್ಯಾಚರಣೆ ನಡೆಸಿತು. ವಶಪಡಿಸಿಕೊಂಡ ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿ ಹಾಗೂ ಸ್ಫೋಟಕಗಳಲ್ಲಿ ಎರಡು ಜಿಎಸ್‌ಜಿ-5 ಜರ್ಮನ್ ರೈಫಲ್ ಹಾಗೂ ಮ್ಯಾಗಝಿನ್, ಉಜ್ಕೋನ್ ಸೆಮಿ ಆಟೋಮ್ಯಾಟಿಕ್ ಶಾಟ್‌ಗನ್ ಹಾಗೂ ಮ್ಯಾಗಝಿನ್, ಎರಡು 9 ಎಂಎಂ ಬೆರೆಟ್ಟಾ ಪಿಸ್ತೂಲ್ ಹಾಗೂ ಮ್ಯಾಗಝಿನ್, ಕಾರ್ಡ್‌ಟೆಕ್ಸ್, ಡಿಟೋನೇಟರ್ ಹಾಗೂ 6000 ಸುತ್ತು ಸ್ಫೋಟಕ ಮೊದಲಾದವುಗಳು ಒಳಗೊಂಡಿವೆ. ಇದನ್ನು ಉಖ್ರುಲ್‌ನಿಂದ ಇಂಫಾಲಕ್ಕೆ ಸಾಗಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್‌ನ ಹೇಳಿಕೆ ತಿಳಿಸಿದೆ.
ಭೂಗತ ಗುಂಪು ದುಷ್ಕೃತ್ಯಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಅಸ್ಸಾಂ ರೈಫಲ್ಸ್‌ನ ಪ್ರಮಖ ಯಶಸ್ಸು ಎಂದು ಅಸ್ಸಾಂ ರೈಫಲ್ಸ್‌ನ ಹೇಳಿಕೆ ತಿಳಿಸಿದೆ.
Next Story





