ಪುತ್ತೂರು;ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರಿಂದ ಧರಣಿ

ಪುತ್ತೂರು,ಮೇ 22: ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇಸುವಂತೆ ಆಗ್ರಹಿಸಿ ಮಂಗಳವಾರ ಪುತ್ತೂರು ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಅಂಚೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯು ಅನಿರ್ದಿಷ್ಠಾವಧಿ ಕಾಲ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ವಿಠಲ ಎಸ್ ಪೂಜಾರಿ, ಕರ್ನಾಟಕ ವಲಯ ಉಪಾಧ್ಯಕ್ಷ ಪ್ರಮೋದ್ ಕುಮಾರ್, ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ, ವಿಭಾಗೀಯ ಗೌರವ ಅಧ್ಯಕ್ಷ ಜಗತ್ಪಾಲ ಹೆಗ್ಡೆ, ಪುತ್ತೂರು ವಿಭಾಗೀಯ ಅದ್ಯಕ್ಷ ಲಿಯೋ ಡಿಸೋಜ, ಕಾರ್ಯದರ್ಶಿ ಸಂತೋಷ್, ಬೆಳ್ತಂಗಡಿ ಉಪವಿಭಾಗೀಯ ಅಧ್ಯಕ್ಷ ಶೇಸಪ್ಪ ಗೌಡ, ಕಾರ್ಯದರ್ಶಿ ಶೇಖರ್, ಬಂಟ್ವಾಳ ವಿಭಾಗೀಯ ಅಧ್ಯಕ್ಷ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು
Next Story





