ರಾಜ್ಯ ಮಟ್ಟದ ಬೆಂಗಳೂರು ಗ್ರಾಫೆಕ್ಸ್-2018: ಅಮೃತ್ ಸಿಂಗ್‍ಗೆ ಪ್ರಥಮ ಬಹುಮಾನ

ಚಿಕ್ಕಮಗಳೂರು, ಮೇ 22: ಬೆಂಗಳೂರಿನ ಲಲಿತ್ ಅಶೋಕ ಹೊಟೇಲ್ ಆವರಣದಲ್ಲಿ ಮೇ 18ರಿಂದ 20 ರವರೆಗೆ 3 ದಿನಗಳ ಕಾಲ ಕರ್ನಾಟಕ ಸರಕಾರ ಹಾಗೂ ಅಭಯ್ ಸಂಯುಕ್ತಾಶ್ರಯದಲ್ಲಿ ನಡೆದ (ಬೆಂಗಳೂರು ಗ್ರಾಫೆಕ್ಸ್ 2018)-ಅನಿಮೇಶನ್ ಉತ್ಸವದಲ್ಲಿ ಚಿಕ್ಕಮಗಳೂರು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಅಮೃತ್‍ಸಿಂಗ್ ರವರಿಗೆ ವೃತ್ತಿಪರ ಶಿಲ್ಪ ರಚಿಸುವ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಸ್ಫರ್ಧೆಯಲ್ಲಿ ಈ ಬಾರಿ ನಾಡಪ್ರಭು ಕೆಂಪೆಗೌಡರ ಬಾವಶಿಲ್ಪ ರಚಿಸಲು ತಿಳಿಸಲಾಗಿದ್ದು, ಇದಕ್ಕೆ ರಾಜ್ಯದಿಂದ ಸುಮಾರು 150 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪ್ರಶಸ್ತಿಯು 20,000 ರೂ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೂಂಡಿರುತ್ತದೆ. ಇವರಿಗೆ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಶಾಂತಿನಿಕೇತನ ಆರ್ಟ್ ಫೌಂಡೇಶನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆಯನ್ನು ತಿಳಿಸಿದ್ದಾರೆ.
Next Story





