Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅತಿ ವಿರಳ ಜೇಡ ಪ್ರಭೇದ ಭಾರತದಲ್ಲಿ ಪತ್ತೆ

ಅತಿ ವಿರಳ ಜೇಡ ಪ್ರಭೇದ ಭಾರತದಲ್ಲಿ ಪತ್ತೆ

ಸಂಶೋಧಕರ ತಂಡದಲ್ಲಿ ಮೂಡುಬಿದಿರೆಯ ಡಾ.ಕೃಷ್ಣಮೋಹನ್

ವಾರ್ತಾಭಾರತಿವಾರ್ತಾಭಾರತಿ23 May 2018 3:06 PM IST
share
ಅತಿ ವಿರಳ ಜೇಡ ಪ್ರಭೇದ ಭಾರತದಲ್ಲಿ ಪತ್ತೆ

ಈ ಸಣ್ಣ ಜೇಡಗಳು ಒಂದು ಚಪ್ಪಟೆ ಮತ್ತು ಅಸ್ಪಷ್ಟವಾದ ನೋಟ ಮತ್ತು ಕಾಲಿನ ಕೆಳಭಾಗದ ಮೇಲೆ ತೀವ್ರವಾದ ನರಗಳು ಕಾಣಿಸಿಕೊಳ್ಳುತ್ತವೆ. ಗಂಡು ಜೇಡ ಕಂದು ಬಣ್ಣ, ಕಪ್ಪು ಬಣ್ಣದಿಂದ ಕೂಡಿದ್ದು, ಸಣ್ಣ ಹಳದಿ ಬಣ್ಣದ ಗುರುತು ಬೆನ್ನಿನ ಭಾಗದಲ್ಲಿ ಹೊಂದಿದೆ. ಹೆಣ್ಣು ಜೇಡಗಳು ಮಸುಕಾದ ಕಂದುಬಣ್ಣವನ್ನು ಹೊಂದಿವೆ. ಪ್ರತಿ ಇಪ್ಪತ್ತು ಹೆಣ್ಣುಗಳ ನಡುವೆ ಕೇವಲ ಒಂದು ಗಂಡು ಜೇಡವಿರುವುದು ಪತ್ತೆಯಾಗಿದೆ.

ಮಂಗಳೂರು, ಮೇ 22: ಜಗತ್ತಿನಲ್ಲಿ ಅತ್ಯಂತ ವಿರಳವಾದ ಜಿಗಿಯುವ ಜೇಡ ಪ್ರಭೇದ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ನೊಬೆರೆಟಸ್ ಎಂಬ ಜೇಡ ಪ್ರಭೇದವನ್ನು ಮುಂಬೈ ಮೂಲದ ಭಾರತೀಯ ಸಂಶೋಧಕರು ಪತ್ತೆ ಮಾಡಿದ್ದು, ಈ ತಂಡದಲ್ಲಿ ಮೂಡುಬಿದಿರೆಯ ನಿಸರ್ಗಪ್ರೇಮಿ ವೈದ್ಯ ಡಾ.ಕೃಷ್ಣ ಮೋಹನ್ ಕೂಡ ಸದಸ್ಯರಾಗಿದ್ದಾರೆ.

ಇತರ ಕೀಟಗಳ ಮೊಟ್ಟೆಗಳನ್ನು ಕದ್ದು ತಿನ್ನುವ ಈ ಚಿಕ್ಕದಾದ ಜಿಗಿಯುವ ಜೇಡ ಮೊದಲಿಗೆ ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಪೂರ್ವ ಏಷ್ಯಾ ಪ್ರದೇಶದಲ್ಲಿ ಕಂಡುಬಂದಿತ್ತು. ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಇಂತಹ ವಿರಳ ಜೇಡ ಪ್ರಭೇದ ಪತ್ತೆಯಾಗಿದ್ದು, ಅವುಗಳ ಶರೀರ ಕೇವಲ 2.5 ಮಿ.ಮೀ.ನಿಂದ 3.5 ಮಿ.ಮೀಟರಿನಷ್ಟಿದೆ. ಚಿಕ್ಕದಾಗಿಯೂ ಅಷ್ಟೊಂದು ಆಕರ್ಷಕವಾಗಿಯೂ ಇಲ್ಲದಿರುವ ಈ ಜೇಡ ಪ್ರಭೇದದ ಜೈವಿಕ ಇತಿಹಾಸ, ಗುಣಸ್ವಭಾವ, ವಾಸಪ್ರದೇಶ ಇತ್ಯಾದಿಗಳ ಅಧ್ಯಯನ ಆಗಿಲ್ಲ. ಜಿಗಿದಾಡುವ ಜೇಡ ಪ್ರಭೇದಗಳ ಬಗ್ಗೆ ಮೀಸಲಾಗಿರುವ ವಿಜ್ಞಾನ ಪ್ರಕಟನೆ ಪೀಕಾಮಿಯದಲ್ಲಿ ಈ ಸಂಶೋಧನೆ ಪ್ರಕಟವಾಗಿದೆ. ಸಂಶೋಧನೆಯನ್ನು ವಿಶ್ವದಲ್ಲಿ ಜೇಡ ಪ್ರಭೇದಗಳ ಬಗ್ಗೆ ತಜ್ಞರಾಗಿರುವ ಡಾ.ಡೆವಿಡ್ ಇ.ಹಿಲ್ ಮತ್ತು ಬ್ರಿಟನಿನ ಜೇಡ ಸಂಶೋಧಕ ಡಾ.ರಿಚರ್ಡ್ ಜೆ.ಪಿಯರ್ಸ್ ಅವರು ಅನುಮೋದಿಸಿದ್ದಾರೆ. ಸಂಶೋಧನ ಲೇಖನವು ಪ್ರಧಾನ ಲೇಖಕ ಮತ್ತು ಸಂಶೋಧಕ ಜಾವೆದ್ ಅಹ್ಮದ್, ಸಹಸಂಶೋಧಕರಾದ ರಾಜಶ್ರೀ ಖಲಾಪ್ ಮತ್ತು ಡಾ.ಕೃಷ್ಣ ಮೋಹನ್ ರಾವ್ ಹೆಸರಿನಲ್ಲಿ ಪ್ರಕಟವಾಗಿದೆ.

ವನ್ಯಜೀವಿ ಛಾಯಾಗ್ರಾಹಕ ಇಂದ್ರಾಣಿಲ್ ಬ್ಯಾನರ್ಜಿ ಈ ಚಿಕ್ಕದಾದ ಜೇಡ ಹುಳುವನ್ನು ಪಶ್ಚಿಮ ಬಂಗಾಲದ ಹಣ್ಣಿನ ತೋಟಗಳಲ್ಲಿ ಸೆರೆಹಿಡಿದಿದ್ದರು. ಒಣಗಿದ ಬಾಳೆ ಎಲೆಗಳ ಮರೆಯಲ್ಲಿ ಇವುಗಳ ವಾಸವಾಗಿತ್ತು. ನೊಬೆರೆಟಸ್ ಪ್ರಭೇದವು ಸ್ಪರ್ಟೆನಿಯ ಉಪ ಪಂಗಡಕ್ಕೆ ಸೇರಿದಾಗಿದ್ದು, ವಿಶಿಷ್ಟವಾದ ಜಿಗಿಯುವ ಜೇಡ ಹುಳುಗಳಾಗಿವೆ. ಇದೇ ತಂಡವು ಈ ಉಪಪಂಗಡಕ್ಕೆ ಸೇರಿದ ಇನ್ನೆರಡು ಜೇಡ ಪ್ರಭೇದ ಗಳನ್ನು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಪತ್ತೆ ಮಾಡಲಾಗಿತ್ತು. ಭಾರತದಲ್ಲಿ ಅಸಂಖ್ಯ ಪ್ರಭೇದಗಳಿದ್ದು, ಈ ಪ್ರದೇಶದಲ್ಲಿ ಅಕಶೇರುಕಗಳ (ಬೆನ್ನೆಲುಬು ಇಲ್ಲದ) ಕೀಟಗಳ ತುಂಬಾ ಪಂಗಡಗಳ ಸಂಶೋಧನೆಯ ಕೊರತೆಯ ಹಿನ್ನೆಲೆಯಲ್ಲಿ ಸಾಕಷ್ಟು ಜೇಡಗಳ ಪತ್ತೆ ಅಥವ ಮರುಪತ್ತೆ ಆಗಬೇಕಾಗಿದೆ. ನಮ್ಮ ತಂಡವು ಒಂದೊಂದಾಗಿ ಪತ್ತೆ ಮಾಡುತ್ತಿದೆ ಎಂದು ಸಂಶೋಧನೆಯ ಹತ್ವದ ಬಗ್ಗೆ ಅಹ್ಮದ್ ತಿಳಿಸಿದ್ದಾರೆ.

ಇದರ ಸಂಶೋಧನಾ ಕಾರ್ಯ 2017 ಫೆಬ್ರವರಿ 8ರಂದು ಆರಂಭವಾಗಿ ಒಂದು ವರ್ಷದೊಳಗೆ ಮುಕ್ತಾಯವಾಗಿದೆ. ಈ ಜೇಡ ಹುಳುವಿನ ವಿಶಿಷ್ಟ ಸ್ವರೂಪದಿಂದ ಗುರುತು ಮಾಡಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X