Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಪಾಹ್ ವೈರಸ್‌ಗಿಂತ ವೇಗವಾಗಿ...

ನಿಪಾಹ್ ವೈರಸ್‌ಗಿಂತ ವೇಗವಾಗಿ ಹರಡುತ್ತಿದೆ ಅದರ ಕುರಿತ ಭಯ, ವದಂತಿ

ಈ ಬಗ್ಗೆ ತಜ್ಞವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಏನು ಹೇಳುತ್ತಾರೆ?

ವಾರ್ತಾಭಾರತಿವಾರ್ತಾಭಾರತಿ23 May 2018 3:08 PM IST
share
ನಿಪಾಹ್ ವೈರಸ್‌ಗಿಂತ ವೇಗವಾಗಿ ಹರಡುತ್ತಿದೆ ಅದರ ಕುರಿತ ಭಯ, ವದಂತಿ

ಮಂಗಳೂರು, ಮೇ 23: ಕೇರಳದಲ್ಲಿ ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿರುವ ನಿಪಾಹ್ ವೈರಸ್ ರೋಗದ ಕುರಿತಂತೆ ಕರ್ನಾಟಕದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಮುಂಜಾಗೃತಾ ಕ್ರಮ, ಎಚ್ಚರಿಕೆ ವಹಿಸಲಾಗಿದೆ. ಈ ನಡುವೆಯೇ ಮಂಗಳೂರಿನಲ್ಲಿ ಎರಡು ಶಂಕಿತ ಪ್ರಕರಣಗಳಿಗೆ ಸಂಬಂಧಿಸಿ ರೋಗಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಇದು ಮಂಗಳೂರಿನಲ್ಲಿಯೂ ಈ ರೋಗ ಹರಡಿದೆ ಎಂಬರಷ್ಟರ ಮಟ್ಟಿಗೆ ಪ್ರಚಾರವಾಗುತ್ತಿದೆ. ಇದರ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳ ಮೂಲಕ ಹಣ್ಣು ತಿನ್ನಬಾರದು, ನೀರು ಕುಡಿಯಬಾರದು, ಮಾಂಸ ತಿನ್ನಬಾರದು ಎಂಬಿತ್ಯಾದಿ ಊಹಾಪೋಹ ಪ್ರೇರಿತ ವಿಚಾರಗಳನ್ನು ಹರಿಯಬಿಡಲಾಗುತ್ತಿದೆ. ಇದು ಜನಸಾಮಾನ್ಯರಲ್ಲಿ ಭಾರೀ ಆತಂಕ ಹಾಗೂ ಭಯಕ್ಕೆ ಕಾರಣವಾಗಿದೆ.

ಅದೆಷ್ಟರ ಮಟ್ಟಿಗೆ ಅಪಪ್ರಚಾರ ಹಬ್ಬಲಾಗಿದೆ ಎಂದರೆ, ಹಣ್ಣುಗಳನ್ನು ತಿನ್ನುವ, ನೀರನ್ನು ಕುಡಿಯುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿರುವ ಜತೆಯಲ್ಲೇ, ಮಾರುಕಟ್ಟೆಗಳಲ್ಲಿ ಹಣ್ಣು ಹಂಪಲು ಮಾರಾಟಗಾರರು ವ್ಯಾಪಾರ ಇಲ್ಲದೆ ಕಂಗಾಲಾಗುವಂತೆ ಮಾಡಿದೆ. ಈ ಬಗ್ಗೆ ‘ವಾರ್ತಾಭಾರತಿ’ ಮಂಗಳೂರಿನ ಖ್ಯಾತ ವೈದ್ಯರಲ್ಲೊಬ್ಬರಾದ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅವರನ್ನು ಮಾತನಾಡಿಸಿದಾಗ, ಅವರು ಹೇಳಿದ್ದು ಹೀಗೆ,

ಇದು ಸಂಪೂರ್ಣ ಅತ್ಯಂತ ಸಣ್ಣ ಮಟ್ಟಿನಲ್ಲಿ ಸ್ಥಳೀಯವಾಗಿ ಅತ್ಯಂತ ನಿಕಟ ಸಂಪರ್ಕಕ್ಕೆ ಬಂದವರಿಗಷ್ಟೆ ಹರಡುತ್ತದೆ ಹೊರತು, ಇದು ಸಾರ್ವಜನಿಕರಿಗೆ ವ್ಯಾಪಕವಾಗಿ ಹರಡುವ ಸೋಂಕು ಅಲ್ಲ. ಸುಲಭವಾಗಿ ಹರಡುವ ಸೋಂಕು ಅಲ್ಲವೇ ಅಲ್ಲ. ಯಾರೂ ಭಯ ಪಡುವ ಅಗತ್ಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ಈ ರೋಗ ಪತ್ತೆಯಾದಾಕ್ಷಣ ಅಲ್ಲಿನ ವೈದ್ಯರು ತಕ್ಷಣ ಚಿಕಿತ್ಸೆ ಒದಗಿಸಿದ್ದಾರೆ. ತನಿಖೆ ಮಾಡಿ ಇದಕ್ಕೆ ಕಾರಣ ಬಾವಲಿ ಎಂಬುದನ್ನು ಕಂಡು ಹಿಡಿದಿದ್ದಾರೆ. ಸತ್ತ ಬಾವಲಿ ಪತ್ತೆಯಾದ ಬಾವಿಯನ್ನು ಮುಚ್ಚಿದ್ದಾರೆ. ಅದರ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ 14 ದಿನ ದೂರವಿರಿಸಿದ್ದಾರೆ. ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಂಗಳೂರಿನಲ್ಲಿ ಶಂಕಿತ ರೋಗಿಗಳ ಮಾದರಿ ಕಳುಹಿಸಿದ ಕೂಡಲೇ ಮಂಗಳೂರಿನಲ್ಲಿ ನಿಪಾಹ್ ಪತ್ತೆ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಒಂದು ರೋಗ ಕಂಡು ಬಂದಾಗ, ನಿಯಮ ಪ್ರಕಾರ ಕೇಂದ್ರ ಸರಕಾರ ಮತ್ತು ಆರೋಗ್ಯ ಇಲಾಖೆ ಎಲ್ಲಾ ವೈದ್ಯರಿಗೂ ಎಚ್ಚರಿಕೆ ನೀಡುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರು ಅನುಮಾನ ಇರುವ ಪ್ರಕರಣಗಳ ರಕ್ತದ ಮಾದರಿ ಅಥವಾ ಇತರ ಮಾದರಿಗಳನ್ನು ತಪಾಸಣೆಗೆ ಕಳುಹಿಸುತ್ತಾರೆ. ಆಗಲೇ ನಿಪಾಹ್ ಪತ್ತೆ ಎಂದು ಹೇಳಲಾಗುವುದಿಲ್ಲ. ನಿಪಾಹ್ ವೈರಸ್ ಈ ಹಿಂದೆ ಭಾರತದಲ್ಲಿ ಕಂಡುಬಂದಾಗಲೂ ತಕ್ಷಣ ನಿಯಂತ್ರಣವಾಗಿದೆ. 2001 ಮತ್ತು 2007ರಲ್ಲಿ ಪಶ್ಚಿಮ ಬಂಗಾಲದಲ್ಲಿ ಬಂದಾಗಲೂ ಅದನ್ನು ಅಲ್ಲಿಯೇ ನಿಯಂತ್ರಣ ಮಾಡಲಾಗಿತ್ತು. ಸಾರ್ವಜನಿಕವಾಗಿ ಈ ಸೋಂಕು ಹರಡಿರುವ ದಾಖಲೆಯೇ ಇಲ್ಲ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳುತ್ತಾರೆ.

ಆ ರೋಗಾಣುವನ್ನು ಹೊಂದಿರುವ ಪ್ರಾಣಿಗಳಿಗೆ ಅತ್ಯಂತ ನಿಕಟ ಸಂಪರ್ಕಕ್ಕೆ ಬರುವವರಿಗೆ ಮಾತ್ರವೇ ಅದು ಹರಡುತ್ತದೆ. ಸಾಧಾರಣವಾಗಿ ಬಾವಲಿ ತಿಂದು ಕಚ್ಚಿದ ಹಣ್ಣನ್ನು ತಿಂದ ಪ್ರಾಣಿಗಳಿಗೆ ಇದು ಬರುತ್ತದೆ. ಆದರೆ ಅಂತಹ ಹಣ್ಣನ್ನು ಮನುಷ್ಯರು ತಿಂದು ಬಂದ ಸಾಕ್ಷಗಳು ಇಲ್ಲ. ಆದರೆ ಹಣ್ಣು ತಿಂದ ಮನುಷರು, ಮಕ್ಕಳಿಗೆ ಬಂದಿರುವುದಕ್ಕೆ ಯಾವುದೇ ರೀತಿಯ ಪುರಾವೆ, ದಾಖಲೆ ಇಲ್ಲ. ಬಾಂಗ್ಲ ದೇಶದಲ್ಲಿ ಈ ಬಗ್ಗೆ ಅಧ್ಯಯನ ಕೂಡಾ ನಡೆಸಲಾಗಿದೆ. ನೀರಿನಿಂದ ಬರುವುದಿಲ್ಲ. ಕಲ್ಲಿಕೋಟೆಯಲ್ಲಿ ಒಂದು ಮನೆಯ ಬಾವಿಯಲ್ಲಿ ಬಾವಲಿ ಬಿದ್ದು, ಆ ಮನೆಯವರಿಗೆ ಮಾತ್ರ ಬಂದಿದೆ. ಆ ಊರಿನ ಬೇರೆ ಯಾರಿಗೂ ಬಂದಿಲ್ಲ. ಹಾಗೆಂದು ದೇಶದ ಎಲ್ಲಾ ಬಾವಿಗಳಲ್ಲಿ ಬಾವಲಿ ಇರುತ್ತದೆ. ಅದು ನೀರಿಗ ಬಿದ್ದು ಸಾಯುತ್ತದೆ. ಆ ನೀರು ಕುಡಿದರೆ ಈ ಸೋಂಕು ಬರುತ್ತದೆ ಎಂಬುದು ತಲೆಬುಡವಿಲ್ಲದ ಮಾತುಗಳು ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸ್ಪಷ್ಟಪಡಿಸಿದ್ದಾರೆ.

ಬೆಳಗ್ಗೆ ತಾಲೂಕು ಆರೋಗ್ಯ ಅಧಿಕಾರಿಯೊಬ್ಬರು ಕರೆ ಮಾಡಿ ಹಣ್ಣು ಹಂಪಲು ಮಾರಾಟಗಾರರು ಇಲ್ಲಿ ಬಂದು ಕುಳಿತಿದ್ದಾರೆ. ಫ್ರೂಟ್ಸ್ ತಿಂದರೆ ಈ ಸೋಂಕು ಬರುವುದೇ ಎಂದು ಪ್ರಶ್ನಿಸುತ್ತಿದ್ದಾರೆ. ವ್ಯಾಪಾರವೇ ಇಲ್ಲ ಎನುತ್ತಿದ್ದಾರೆ ಎಂದು ನನ್ನಲ್ಲಿ ಕೇಳಿದ್ದಾರೆ. ಅವರಿಗೆ ನಾನು ಈ ಹಿಂದೆ ಈ ರೋಗ ಕಂಡು ಬಂದಾಗ ನಡೆದ ಅಧ್ಯಯನ ವರದಿಯನ್ನು ಕಳುಹಿಸಿದ್ದೇನೆ. ಬಾಂಗ್ಲಾದೇಶದಲ್ಲಿ ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿ ಮಕ್ಕಳ ಆಹಾರವೇ ಹಣ್ಣುಗಳು. ಸಿಕ್ಕಿದ ಹಣ್ಣುಹಂಪಲುಗಳನ್ನು ತಿನ್ನುತ್ತಾರೆ. ಅಪೌಷ್ಟಿಕತೆಯ ಹಿನ್ನೆಲೆಯಲ್ಲಿ ಅಲ್ಲಿ ಅವರಿಗೆ ಬೇರೆ ಆಹಾರ ಸಿಗುವುದು ಅಪರೂಪ. ಅದಕ್ಕೆ ಸಿಕ್ಕಿದ ಹಣ್ಣು ಗಳನ್ನು ತಿನ್ನುತ್ತಾರೆ. ಆದರೆ ಆ ಹಣ್ಣು ತಿಂದ ಮಕ್ಕಳಿಗೆ ಯಾರಿಗೂ ನಿಪಾಹ್ ಬಂದಿಲ್ಲ ಮತ್ತು ನಿಪಾಹ್ ರೋಗಕ್ಕೆ ತುತ್ತಾಗಿರುವವರು ಹಣ್ಣು ತಿಂದೇ ಇಲ್ಲ. ಮನುಷ್ಯರು ಹಣ್ಣು ತಿಂದು ನಿಪಾಹ್ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷವಿಲ್ಲ.

ಇದುವರೆಗೆ ದಾಖಲೀಕರಣ ಮಾಡಲಾದ 600ಕ್ಕೂ ಅಧಿಕ ಪ್ರಕರಣಗಳು ಹರಡಿರುವುದು ಹಂದಿಯ ಫಾರ್ಮ್‌ನಲ್ಲಿ ಕೆಲಸ ಮಾಡುವ ಕೆಲಸಗಾರಿಗೆ ಹರಡಿದ ಸೋಂಕುಗಳು. ಒಂದು ಪ್ರಕರಣ ಮನೆಯಲ್ಲಿ ಸಾಕಿದ ಆಡುಗಳಿಗೆ ನಿಪಾಹ್ ಸೋಂಕು ತಗುಲಿತ್ತು. ಆಡಿನ ಜತೆ ಆಟವಾಡುತ್ತಿದ್ದ ಮಗುವಿಗೆ ಬಂದಿರುವ ಮತ್ತೊಂದು ಪ್ರಕರಣ. ಬಾಂಗ್ಲಾದೇಶದಲ್ಲಿ ಖರ್ಜೂರದ ರಸವನ್ನು ಇಳಿಸಲು ಮರಕ್ಕೆ ಪಾತ್ರೆ ಕಟ್ಟುತ್ತಾರೆ. ಸೋಂಕು ಪೀಡಿತ ಬಾವಲಿ ಆ ಪಾತ್ರೆಯಿಂದ ಖರ್ಜೂರದ ರಸ ಕುಡಿದರೆ ರಸ ಸೋಂಕುಪೀಡಿತವಾಗುತ್ತದೆ. ಅಂತಹ ರಸ ಕುಡಿದವರಿಗೆ ಸೋಂಕು ತಗಲಿದ ಉದಾಹರಣೆ ಇದೆ. ಇದು ಸ್ಪಷ್ಟ ಮಾಹಿತಿಗಳು.ಈ ರೋಗಿಗಳ ಹತ್ತಿರ ಕುಳಿತು, ಅವರು ಊಟ ಮಾಡಿದ ಅನ್ನದಲ್ಲಿ ಅವರ ಜೊಲ್ಲು ಸೇರಿದ್ದಲ್ಲಿ ಅದನ್ನು ಸೇವಿಸಿದವರಿಗೆ ಅಥವಾ ಅವರ ಜೊಲ್ಲು ಇನ್ಯಾವುದೋ ರೀತಿಯಲ್ಲಿ ಬೇರೆಯವರ ದೇಹಕ್ಕೆ ಹೋಗಿ ಈ ರೋಗ ಬಂದಿದೆಯೇ ಹೊರತು ಅವರ ಹತ್ತಿರ ಇದ್ದವರಿಗೆ ರೋಗ ಹರಡಿದ ದಾಖಲೆ, ಪ್ರಕರಣ ವರದಿಯಾಗಿಲ್ಲ ಎಂದು ಅವರು ತಿಳಿಸಿದರು.

ಕೇರದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದ ನರ್ಸ್ ದೇಹಕ್ಕೆ ಯಾವುದೋ ರೀತಿಯಲ್ಲಿ ಸೋಂಕಿತ ವ್ಯಕ್ತಿಯಿಂದ ರೋಗಾಣು ತಗಲಿರಬಹುದು. ಆದರೆ ಆಕೆ ಈಗಿಲ್ಲ. ಹಾಗಾಗಿ ಆಕೆಗೆ ಹೇಗೆ ತಗುಲಿದೆ ಎಂಬುದನ್ನು ಕಂಡುಹಿಡಿಯಲು ಅಸಾಧ್ಯ. ಆದರೆ ದಾಖಲೀಕರಣಗೊಂಡ ಪ್ರಕರಣಗಳಲ್ಲಿ ಅತ್ಯಂತ ಸುಲಭದಲ್ಲಿ ಈ ಸೋಂಕು ಹರಡಿರುವ ಪ್ರಕರಣವೇ ಇಲ್ಲ. ಪಶ್ಚಿಮ ಬಂಗಾಲದ ಒಂದು ಪ್ರಕರಣದಲ್ಲಿ ರೋಗಿಯನ್ನು ನೋಡಲು ಬಂದ ಮೌಲ್ವಿಯೊಬ್ಬರಿಗೆ ಈ ಸೋಂಕು ತಗಲಿತ್ತು. ಆ ಮೌಲ್ವಿಗೆ ಆರೈಕೆ ಮಾಡುವ ವೇಳೆ ಅವರ ಶಿಷ್ಯಂದಿರು ಒಟ್ಟಿಗೆ ಕೂತು ಊಟ ಮಾಡಿ ಅವರ ಸಮೀಪದಲ್ಲಿ ಅವರ ಆರೈಕೆ ಮಾಡಿದವರಿಗೆ ರೋಗ ಬಂದಿರುವ ಬಗ್ಗೆ ದಾಖಲೆ ಇದೆ. ಆದರೆ ಈ ರೋಗ ಬೇರೆ ಯಾರಿಗೂ ಅಲ್ಲಿಯೂ ಹರಡಿರಲಿಲ್ಲ.

ಎಚ್1 ಎನ್1 ಸೋಂಕು ಹರಡಿದ ಹಾಗೆ ನಿಪಾಹ್ ವೈರಸ್ ಹರಡಿರುವ ದಾಖಲೆಗಳಿಲ್ಲ. ಕೇರಳ ಕಲ್ಲಿಕೋಟೆಯ ಒಂದು ಕುಟುಂಬದ ಇಬ್ಬರು ಯುವಕರು, ಅವರ ತಂದೆ, ಸೋದರತ್ತೆ, ಅವರಿಗೆ ಚಿಕಿತ್ಸೆ ಕೊಟ್ಟ ನರ್ಸ್ ಮತ್ತೆ ಆ ಯುವಕರಲ್ಲೊಬ್ಬಾತನ ಜೊತೆ ವಿವಾಹ ನಿಶ್ಚಿತಾರ್ಥಗೊಂಡಿದ್ದ ಯುವತಿ ಮತ್ತು ಆಕೆಯ ಜತೆಗೆ ಬಂದಿದ್ದ ಆಕೆಯ ಸ್ನೇಹಿತೆ. ಇವರಿಗೆ ಮಾತ್ರ ಬಂದಿರುವುದು ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.

ಆದರೆ ನೀರು ಕುಡಿಯಬಾರದು, ಹಣ್ಣು ತಿನ್ನಲು ಬಾರದು ಎನ್ನುವುದು ಅರ್ಥವಿಲ್ಲದ ಮಾತುಗಳು. ನಾವು ವೈದ್ಯರೂ ಸೇರಿ ನಮ್ಮ ಮೆದುಳನ್ನು ಉಪಯೋಗಿಸುವುದನ್ನೇ ಬಿಟ್ಟಿದ್ದೇವೆ. ಅದರಿಂದ ಇಂತಹ ವ್ಯಾಪಕ ಆತಂಕ, ಭಯಕ್ಕೆ ಕಾರಣವಾಗುತ್ತಿದೆ. ಯಾರಾದರೂ ಒಬ್ಬ ಏನಾದರೂ ಹೇಳಿದಾಕ್ಷಣ, ಅದರ ಬಗ್ಗೆ ಹಿಂದುಮುಂದು ಆಲೋಚಿಸದೆ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಫಾರ್ವರ್ಡ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ನಿಯಂತ್ರಿಸಲು ಅಸಾಧ್ಯ. ಜನರು ವೈಜ್ಞಾನಿಕ ಮನೋಭಾವ ಹೊಂದಿ, ಗೊತ್ತಿದ್ದವರಲ್ಲಿ ಕೇಳಬೇಕು. ಇಲ್ಲವಾದಲ್ಲಿ ಹೀಗೆ ಅಪಪ್ರಚಾರಗಳಿಗೆ ಕಾರಣವಾಗುತ್ತದೆ.

ಕಲ್ಲಿಕೋಟೆಯಲ್ಲಿ ರೋಗ ಲಕ್ಷಣ ಪತ್ತೆಯಾದಾಕ್ಷಣ ಅಲ್ಲಿನ ವೈದ್ಯ ಸಮೂಹ ಸೇರಿ ತಕ್ಷಣ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆ ಬ ಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಅದು ಬಿಟ್ಟು ವಿನಾ ಕಾರಣ ವೈಜ್ಞಾನಿಕವಾಗಿ ಅರಿವಿಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಸಿಕ್ಕಿದ್ದನ್ನೆಲ್ಲಾ ಹರಡುವುದು ಸರಿಯಲ್ಲ ಎಂದು ಡಾ.ಕಕ್ಕಿಲ್ಲಾಯ ಸಾರ್ವಜನಿಕರಿಗೆ ಸಲಹೆಯ ಜತೆಗೆ ಮನವಿಯನ್ನೂ ಮಾಡಿದ್ದಾರೆ.

 ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ತಜ್ಞ ವೈದ್ಯರು, ಮಂಗಳೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X