ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಬಿಡಿ ವಿಲಿಯರ್ಸ್
ಹೊಸದಿಲ್ಲಿ, ಮೇ 23: ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
“ತಕ್ಷಣಕ್ಕೆ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲು ನಾನು ಇಚ್ಛಿಸಿದ್ದೇನೆ “ ಎಂದು ವಿಲಿಯರ್ಸ್ ಬುಧವಾರ ಹೇಳಿದರು.
"ಇದು ಕಠಿಣ ನಿರ್ಧಾರ. ಈ ಹಿಂದೆಯೇ ಈ ಬಗ್ಗೆ ಯೋಚಿಸಿದ್ದೆ. ಒಳ್ಳೆಯ ಫಾರ್ಮ್ ನಲ್ಲಿರುವಾಗಲೇ ನಿವೃತ್ತಿ ಘೋಷಿಸಬೇಕೆಂದು ನಾನು ಬಯಸಿದ್ದೆ. ಭಾರತ ಹಾಗು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳನ್ನು ಜಯಿಸಿದ ನಂತರ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ" ಎಂದವರು ಹೇಳಿದರು.
Next Story