ಸುಳ್ಯ: ಗ್ರೀನ್ ವ್ಯೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸುಳ್ಯ, ಮೇ 23: ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೋಷಕರಿಗೆ ಅಭಿನಂದನಾ ಸಮಾರಂಭ ಜರಗಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಐ. ಇಸ್ಮಾಯಿಲ್ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಶಾಲಾ ಸಂಚಾಲಕ ಜೇಸಿ ಎಚ್.ಜಿ.ಎಫ್ ಬಿ.ಎಸ್. ಶರೀಫ್, ಕಾರ್ಯದರ್ಶಿ ಕೆ.ಬಿ. ಇಬ್ರಾಹಿಂ, ಯೋಜನಾ ನಿರ್ದೆಶಕ ಕೆ.ಎಂ. ಮುಸ್ತಫ, ಉಪಾಧ್ಯಕ್ಷ ಹಾಜಿ ಕೆ.ಎಂ. ಮುಹಿಯದ್ದೀನ್ ಫ್ಯಾನ್ಸಿ, ಮುಖ್ಯೋಪಾಧ್ಯಾಯ ಅಮರನಾಥ ಬಿ.ಪಿ. ಮೊದಲಾದವರು ಭಾಗವಹಿಸಿದರು.
ಶಿಕ್ಷಕ ರಂಜಿತ್ ಸ್ವಾಗತಿಸಿ, ಮಂಜುನಾಥ್ ವಂದಿಸಿದರು. ವಸಂತಿ ಮೇಡಂ ಕಾರ್ಯಕ್ರಮ ನಿರೂಪಿಸಿದರು.
Next Story





