ದ.ಕ.ಜಿಲ್ಲೆಯಲ್ಲಿ ನಿಪಾಹ್ ಪ್ರಕರಣ ಇನ್ನೂ ಖಚಿತಗೊಂಡಿಲ್ಲ: ಡಾ.ರಾಮಕೃಷ್ಣ
ಮಂಗಳೂರು, ಮೇ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವೂದೇ ನಿಪಾಹ್ ಪ್ರಕರಣ ಇನ್ನೂ ಖಚಿತಗೊಂಡಿಲ್ಲ ಆದರೂ ಸಾಕಷ್ಟು ವದಂತಿಗಳು ಹರಡುತ್ತಿದೆ ಈ ರೀತಿಯ ವದಂತಿಗಳನ್ನು ಜನರು ನಂಬಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿಪಾಹ್ ವೈರಸ್ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈ ಗೊಳ್ಳಲಾಗಿದೆ. ಖಾಸಗಿ ಆರೋಗ್ಯ ಸಂಸ್ಥೆಗಳ ಸಹಕಾರವನ್ನು ಕೋರಲಾಗಿದೆ. ನಿಪಾಹ್ ವೈರಸ್ ಬಗ್ಗೆ ಜಿಲ್ಲೆಯ ಜನರು ಭೀತಿ ಪಡುವ ವಾತವರಣ ಇಲ್ಲ. ಸಾರ್ವಜನಿಕರು ಅನಗತ್ಯವಾದ ವದಂತಿ ಗಳನ್ನು ಹಬ್ಬಿಸಬಾರದು ಎಂದು ಮನವಿ ಮಾಡುವುದಾಗಿ ಡಾ.ರಾಮಕೃಷ್ಣ ಹೇಳಿದ್ದಾರೆ.
ಜಿಲ್ಲೆಯಲ್ಲಿ ವೈರಸ್ ಜ್ವರದಿಂದ ಬಳಲುತ್ತಿದ್ದ ಇಬ್ಬರು ಚೇತರಿಕೆ:- ಜಿಲ್ಲೆಯಲ್ಲಿ ವೈರಸ್ ಜ್ವರದಿಂದ ಬಳಲುತ್ತಿದ್ದ ಇಬ್ಬರು ಶೀಘ್ರವಾಗಿ ಚೇತರಿಸಿ ಕೊಳ್ಳುತ್ತಿದ್ದಾರೆ. ಮಳೆಗಾಲದ ಆರಂಭದಲ್ಲಿ ವೈರಸ್ ಜ್ವರ ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ಈ ಇಬ್ಬರಿಗೂ ನಿಪಾಹ್ ಸೋಂಕು ತಗುಲಿದೆಯೇ ? ಎನ್ನುವುದು ಖಚಿತಗೊಂಡಿಲ್ಲ. ಜಿಲ್ಲೆಯಲ್ಲಿ ನಿಪಾಹ್ ತಗುಲಿರುವ ಯಾವೂದೇ ಪ್ರಕರಣ ಖಚಿತಗೊಂಡಿಲ್ಲ ಎಂದು ನಗರದ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





