ಸೇವಾ ಸಿಂಧು ಯೋಜನೆ
ಉಡುಪಿ, ಮೇ 23: ಸರಕಾರದ ಸೇವೆಗಳನ್ನು ಸಾರ್ವಜನಿಕರಿಗೆ ಉಪಯೋಗ ವಾಗುವಂತೆ ಒಂದೇ ಸೂರಿನಡಿ ನೀಡುವಂತಹ ‘ಸೇವಾಸಿಂಧು’ ಎಂಬ ಹೊಸ ಯೋಜನೆಯನ್ನು ಸರಕಾರ ರೂಪಿಸಿದ್ದು, ಇದರಲ್ಲಿ 29 ಇಲಾಖೆಗಳ 346 ಸೇವೆಗಳ್ನು ಒದಗಿಸಲು ಸರಕಾರ ನಿರ್ಧರಿಸಿದೆ.
ಈ ಸೇವೆಗಳ ಪೈಕಿ ಕಂದಾಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಔಷಧಗಳ ನಿಯಂತ್ರಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಯೋಜನಾ ಇಲಾಖೆಗಳ 44 ಸೇವೆಗಳು ಲಭ್ಯವಿರುತ್ತವೆ.
ಈ ಸೇವೆಗಳನ್ನು ಸಾರ್ವಜನಿಕರು ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ (http://sevasindhu.karnataka.gov.in/) ನೇರವಾಗಿ ನೋಂದಣಿಗೊಂಡು ಅಥವಾ ಸಾಮಾನ್ಯ ಸೇವಾ ಕೇಂದ್ರಗಳ (CSC) ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





