ಗ್ರಾಮ ಪಂಚಾಯತ್ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ
ಮಂಗಳೂರು ಮೇ 24: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯ ಮೂಲಕ ಭರ್ತಿ ಮಾಡಲು ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲ್ಲೂರು-1 ಹಾಗೂ 2, ಬೆಳ್ತಂಗಡಿ ತಾಲೂಕಿನ ಅಂಡಿಂಜೆ-2 ಒಂದು ಸ್ಥಾನ, ಸುಳ್ಯ ತಾಲೂಕಿನ ಸಂಪಾಜೆ-3 ಒಂದು ಸ್ಥಾನ, ಪಂಜ ಗ್ರಾಮ ಪಂಚಾಯತ್ ಐವತೊತಿಕ್ಲು ಒಂದು ಸ್ಥಾನ, ಬಂಟ್ವಾಳ ತಾಲೂಕಿನ ಇರ್ವತೂತಿರು ಗ್ರಾಮ ಪಂಚಾಯತ್ ಮೂಡುಪಡುಕೋಡಿ-1 ಒಂದು ಸ್ಥಾನ, ಅಮ್ಟಾಡಿ-3 ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮೇ 30 ಆಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 2. ಮತದಾನ ಜೂ.14 ರಂದು ನಡೆಯಲಿದೆ. ಮತಗಳ ಎಣಿಕೆ ಜೂನ್ 17ರಂದು ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





