Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವೃದ್ದರ, ದುರ್ಬಲರ ಆಶಾಕಿರಣ ‘ಕೀಪ್ ಮೀ...

ವೃದ್ದರ, ದುರ್ಬಲರ ಆಶಾಕಿರಣ ‘ಕೀಪ್ ಮೀ ಸೇಫ್’

ವಾರ್ತಾಭಾರತಿವಾರ್ತಾಭಾರತಿ24 May 2018 7:21 PM IST
share
ವೃದ್ದರ, ದುರ್ಬಲರ ಆಶಾಕಿರಣ ‘ಕೀಪ್ ಮೀ ಸೇಫ್’

ಉಡುಪಿ, ಮೇ 24: ದೈಹಿಕವಾಗಿ ದುರ್ಬಲರು, ವಿಕಲಚೇತನರು ಹಾಗೂ ವೃದ್ಧರು ಎಲ್ಲದಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಕಾದ ದುಃಸ್ಥಿತಿ ಹಾಗೂ ನಗರಗಳಲ್ಲಿ ಅಶಕ್ತರು ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಲೂಟಿ, ಹತ್ಯೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ.

ಈ ಯೋಜನೆಯಲ್ಲಿ ವೃದ್ಧ/ವಿಕಲಚೇತನ ವ್ಯಕ್ತಿ ವಾಸವಿರುವ ಮನೆಗೆ ಯಾರಾದರೂ ಸಂದರ್ಶಕ ಬಂದ ಪಕ್ಷದಲ್ಲಿ ಮೊದಲು ಆತನು, ವಿಶೇಷ ರೀತಿ ಯಲ್ಲಿ ಸಿದ್ಧಪಡಿಸಿದ ಕರೆಘಂಟೆಯನ್ನು ಒತ್ತಬೇಕು. ಈ ಕರೆಘಂಟೆಯಲ್ಲಿ ವ್ಯಕ್ತಿಯ ಬೆರಳಚ್ಚು ಸಂಗ್ರಹ ಆಗುವ ವಿಶೇಷ ಲಕ್ಷಣ ಅಡಕಗೊಂಡಿದ್ದು, ಸಂದರ್ಶಕನಿಗೆ ಅರಿವಿಲ್ಲದೇ ಆತನ ಬೆರಳಚ್ಚು ಸ್ಕ್ಯಾನ್ ಆಗಿ ಪರಿಚಿತರ ಬೆರಳಚ್ಚುಗಳ ಸಂಪೂರ್ಣ ಸಂಗ್ರಹವಿರುವ ಒಂದು ಡೇಟಾಬೇಸ್‌ನೊಂದಿಗೆ ತಾಳೆ ಹಾಕಿ ನೋಡಲಾಗುತ್ತದೆ.

ಒಂದು ವೇಳೆ ಸಂದರ್ಶಕನ ಬೆರಳಚ್ಚು ಹೊಂದಿಕೆಯಾದ ಪಕ್ಷದಲ್ಲಿ ಅವನ ಪರಿಚಯವನ್ನು ವೃದ್ಧ/ವಿಕಲಚೇತನ/ದೃಷ್ಟಿಮಾಂದ್ಯನ ಸ್ಮಾರ್ಟ್ ಫೋನ್‌ನ ಒಂದು ವಿಶಿಷ್ಟ ಆ್ಯಪ್ ‘ಟೆಕ್ಸ್ಟ್ಟ್ ಟು ಸ್ಪೀಚ್’ ಎಂಬ ತಂತ್ರಜ್ಞಾನ ಮೂಲಕ ಅವನಿಗೆ ಧ್ವನಿಯ ರೂಪದಲ್ಲಿ ಮನೆಯಲ್ಲಿ ಮೊದಲೇ ಅಳವಡಿಸಲಾದ ಶಕ್ತಿಯುತವಾದ ಧ್ವನಿವರ್ಧಕದ ಮೂಲಕ ಕೇಳಿಸುತ್ತದೆ.

ಸಂದರ್ಶಕನು ಆಗಂತುಕ ಇಲ್ಲ, ಅಪರಿಚಿತನಾಗಿದ್ದ ಪಕ್ಷದಲ್ಲಿ ಆತನ ಬೆರಳಚ್ಚು ಸಂಗ್ರಹಕೋಶದಲ್ಲಿನ ಮಾದರಿಗಳಿಗೆ ಹೊಂದಿಕೆಯಾಗದ ಪರಿಣಾಮ ತಕ್ಷಣ ಮನೆಯ ಹೊರಬಾಗಿಲಿನಲ್ಲಿ ಅಳವಡಿಸಲಾದ ಗುಪ್ತ ಕ್ಯಾಮರಾ ಆ ಆಗಂತುಕನ ಛಾಯಾಚಿತ್ರವನ್ನು ಸೆರೆಹಿಡಿದು ಕ್ಷಣ ಮಾತ್ರದಲ್ಲಿ ದೂರದ ಸ್ಥಳದಲ್ಲಿ ಕೆಲಸದಲ್ಲಿ ನಿರತನಾಗಿರುವ ಆತನ ಪೋಷಕ ಯಾ ಯಜಮಾನರಿಗೆ ಕಳುಹಿ ಸುತ್ತದೆ. ಇದಕ್ಕೆ ಪ್ರತಿಯಾಗಿ ಪೋಷಕನು ತಕ್ಷಣ ಕಳುಹಿಸುವ ಬಾಗಿಲನ್ನು ತೆರೆಯುವುದು ಸೂಕ್ತವಲ್ಲ ಎಂಬ ಎಚ್ಚರಿಕೆಯ ಸಂದೇಶ ಮತ್ತು ಶಕ್ತಿಶಾಲಿ ಧ್ವನಿವರ್ಧಕದಲ್ಲಿ ಕೇಳಿಬರುತ್ತದೆ.

ಅಂತೆಯೇ ಮನೆಯ ಮುಂಬಾಗಿಲಿನಲ್ಲಿ ಅಳವಡಿಸಲಾದ ಮತ್ತೊಂದು ಗುಪ್ತ ಸಾಧನ ದಿನದ 24 ಗಂಟೆಗಳ ಕಾಲ ಮನೆಯ ಮುಂದೆ ಏನೇ ಅನು ಮಾನಾಸ್ಪದ ಚಲನವಲನಗಳಾದರೂ ಬಜರ್ ಒಂದು ಬಾರೀ ಶಬ್ದದ ಮೂಲಕ ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ಈ ಯೋಜನೆ ಮನೆಯ ಒಳಗಿರುವ ವೃದ್ಧ/ದುರ್ಬಲರ ಸಂಪೂರ್ಣ ಭದ್ರತೆಯನ್ನು ಖಚಿತ ಪಡಿಸುತ್ತದೆ ಹಾಗೂ ಪೋಷಕರ ನೆಮ್ಮದಿಯನ್ನು ಖಾತ್ರಿಪಡಿಸುತ್ತದೆ.

ಆದುದರಿಂದ ಕೀಪ್ ಮಿ ಸೇಪ್ ತಂತ್ರಜ್ಞಾನ ವೃದ್ಧ ಹಾಗೂ ದುರ್ಬಲರ ಆಶಾಕಿರಣವಾಗಿ ಶ್ರಮಿಸಬಲ್ಲದು ಎಂದು ಬಂಟಕಲ್ ಶ್ರೀಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎನ್.ರಾಮಚಂದ್ರ ಹಾಗೂ ವಿದ್ಯಾರ್ಥಿಗಳಾದ ಸುಶ್ಮಿತಾ ಬಾಳಿಗಾ, ಸೃಷ್ಟಿ, ರಂಜನಿ ಹಾಗೂ ಅಮೃತ ಆಚಾರ್ಯ ಅವರ ತಂಡ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X