ಯುವತಿ ನಾಪತ್ತೆ
ಮಂಗಳೂರು, ಮೇ 24: ತೆಂಕಮಿಜಾರು ಅನಾಥಗುಡ್ಡೆ ನಿವಾಸಿ ದಿ.ಪದ್ಮನಾಭ ಎಂಬವರ ಪುತ್ರಿ ಚೈತ್ರಾ (19) ಎಂಬವರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೈತ್ರಾ ಅವರು ಮೇ 23ರಂದು ಬೆಳಗ್ಗೆ 8 ಗಂಟೆಗೆ ನಗರದ ಸ್ಟೇಟ್‌ಬ್ಯಾಂಕಿನಿಂದ ಹೆಜಮಾಡಿ ಕೋಡಿ ಎಂಬ ಬಸ್ಸಿನಲ್ಲಿ ಹೋದವರು ಮನೆಗೆ ವಾಪಾಸು ಬರದೆ ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ. 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣಾ ಶರೀರ, ಕಪ್ಪು ತಲೆ ಕೂದಲು, ನೀಲಿ ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಿದವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824-2220518 ಅಥವಾ ನಗರ ನಿಯಂತ್ರಣ ಕೊಠಡಿ 0824-2220800ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





