ಗಾಂಜಾ ಸೇವನೆ: ಇಬ್ಬರ ಬಂಧನ
ಪುತ್ತೂರು, ಮೇ 24: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ಪುತ್ತೂರು ನಗರ ಪೊಲೀಸರು ಬುಧವಾರ ರಾತ್ರಿ ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಮರಕ್ಕೂರು ನಿವಾಸಿ ಹರೀಶ್ ಕುಮಾರ್ (19) ಮತ್ತು ಕರ್ಗಲ್ಲು ನಿವಾಸಿ ಶ್ರವಣ್ ಕೆ ಬಂಧಿತ ಆರೋಪಿಗಳು. ಇವರಿಬ್ಬರು ಪುರಷರಕಟ್ಟೆ ಎಂಬಲ್ಲಿರುವ ಗ್ರಾಮ ಪಂಚಾಯತ್ ಕಚೇರಿ ಬಳಿಯಲ್ಲಿ ರಾತ್ರಿ ವೇಳೆ ಗಾಂಜಾ ಸೇವನೆ ನಡೆಸುತ್ತಿದ್ದರು ಎನ್ನಲಾಗಿದ್ದು, ಇವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದರು. ವೈದ್ಯರು ಗಾಂಜಾ ಸೇವನೆಯನ್ನು ದೃಡಪಡಿಸಿದ್ದರು. ಬಳಿಕ ಕೇಸು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ನಗರ ಠಾಣಾ ಎಸ್‌ಐ ಅಜಯ್‌ಕುಮಾರ್, ಸಿಬ್ಬಂದಿಗಳಾದ ಹರೀಶ್ ಪುಂಚಪ್ಪಾಡಿ ಮತ್ತು ಚೋಳಯ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story





