ಪಾಕ್ ಸೇನೆಯಿಂದ ಶೆಲ್ ದಾಳಿ: ಮನೆ ತ್ಯಜಿಸಿದ 1 ಲಕ್ಷಕ್ಕೂ ಅಧಿಕ ಜನ
ಬಿಜೆಪಿ ಅಧಿಕಾರವಧಿಯಲ್ಲಿ ಹೆಚ್ಚಿದ ದಾಳಿ: ನಿವೃತ್ತ ಯೋಧನ ಆಕ್ರೋಶ

ರಾಮಗಢ, ಮೇ 24: ಜಮ್ಮು ಹಾಗೂ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ನಿರಂತರ ಶೆಲ್ ದಾಳಿಯ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಮನೆ ತ್ಯಜಿಸಿದ್ದಾರೆ. ಪಾಕಿಸ್ತಾನದ ಯೋಧರು 198 ಕಿ.ಮೀ. ಗಡಿಗುಂಟ ಗ್ರಾಮಗಳು ಹಾಗೂ ಗಡಿ ಭದ್ರತಾ ಪಡೆಯ ಠಾಣೆಯನ್ನು ಗುರಿಯಾಗಿರಿಸಿ ಶೆಲ್ ದಾಳಿ ನಡೆಸಿದ್ದಾರೆ. ಒಂದು ವಾರಗಳ ಹಿಂದೆ ಶೆಲ್ ದಾಳಿಯಿಂದ ರಾಮಗಢದಲ್ಲಿ ನಾಲ್ವರು ಮೃತಪಟ್ಟಿದ್ದರು ಹಾಗೂ 25 ಮಂದಿ ಗಾಯಗೊಂಡಿದ್ದರು. ನಿವೃತ್ತ ಯೋಧ ದೇಸ್ ರಾಜ್ (61) ಈ ಪರಿಸ್ಥಿತಿಗೆ ಸರಕಾರವನ್ನು ದೂರಿದ್ದಾರೆ. ''ದಶಕಗಳ ಕಾಲ ಪಾಕ್ ಕಡೆಯಿಂದ ದಾಳಿ ಎದುರಿಸಿದ ಅನುಭವ ನಮಗಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ದಾಳಿಯ ತೀವ್ರತೆ ಹೆಚ್ಚಾಗಿದೆ'' ಎಂದು ಅವರು ಹೇಳಿದ್ದಾರೆ. ಜನರು ನಿವಾಸ ತ್ಯಜಿಸಿದ ಹಿನ್ನೆಲೆಯಲ್ಲಿ ನಂಗಾ ಗ್ರಾಮ ದೆವ್ವದ ಗ್ರಾಮದಂತಾಗಿದೆ. ಮನೆ ಹಾಗೂ ದನಕರುಗಳನ್ನು ನೋಡಿಕೊಳ್ಳಲು ಕೇವಲ 3,500 ಜನರು ಮಾತ್ರ ಹಿಂದಿರುಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Next Story





