ಕೊಪ್ಪದಲ್ಲಿ ಸಾಮೂಹಿಕ ಉಪನಯನ, ವಿಶ್ವಕರ್ಮ ಪೂಜೆ
ಉಡುಪಿ, ಮೇ 24: ಕೊಪ್ಪ ಶ್ರೀವಿಶ್ವಕರ್ಮ ಸಮಾಜ ಸಂಘದ ವತಿಯಿಂದ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಹಾಗೂ ವಿಶ್ವಕರ್ಮ ಪೂಜೆಯು ಇತ್ತೀಚೆಗೆ ಕೊಪ್ಪ ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಮೋಹನ ಪುರೋಹಿತರ ಆಚಾರ್ಯತ್ವ ಹಾಗು ಸಂಘದ ಅಧ್ಯಕ್ಷ ಕೆ. ಎಸ್. ಜನಾರ್ಧನ ಆಚಾರ್ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ಮಂಗಳೂರು ಸಹಚಿಂತನ ಇದರ ಗೌರವ ಪ್ರಧಾನ ಸಂಪಾದಕ ಬಿ.ಎ.ಆಚಾರ್ಯ ಮಣಿಪಾಲ, ನರಸಿಂಹಪುರವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಗುತ್ತಿಗೆದಾರ ದಾಮೋದರ ಶೆಟ್ಟಿ ಅವರನ್ನು ಸನ್ಮಾನಿಸ ಲಾಯಿತು. ಉಮೇಶ ಆಚಾರ್ಯರು ಸನ್ಮಾನಿತರನ್ನು ಪರಿಚಯಿಸಿದರು. ಗ್ರಾಮ ಮೊಕ್ತೇಸರ ಸಂಕ್ರಯ್ಯ ಆಚಾರ್ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯರು ಸ್ವಾಗತಿಸಿದರು. ಪ್ರಭಾಕರ ಆಚಾರ್ಯ ವಾರ್ಷಿಕ ವರದಿ ನೀಡಿದರು. ಸುಧಾ ಕಾರ್ಯಕ್ರಮ ನಿರೂಪಿಸಿದರು. ರವಿ ಎಸ್.ಆಚಾರ್ಯ ವಂದಿಸಿದರು.
Next Story





