ಮಡಿಕೇರಿ: ನಿಫ್ಹಾ ವೈರಸ್ ಕುರಿತು ಮುಂಜಾಗೃತಾ ಕ್ರಮ; ಮೆಡಿಕಲ್ ಕಾಲೇಜ್‍ನಲ್ಲಿ ತರಬೇತಿ

ಮಡಿಕೇರಿ,ಮೇ.24: ನಿಫ್ಹಾ ವೈರಸ್‍ನ ಕುರಿತು ಮುಂಜಾಗೃತಾ ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ಆಸ್ಪತ್ರೆಗೆ ಬರುವ ರೋಗಿಗಳನ್ನು ಉಪಚರಿಸುವ ಬಗ್ಗೆ ಆಸ್ಪತ್ರೆಯ ಶೂಶ್ರೂಷಕರಿಗೆ, ವೈದ್ಯರಿಗೆ ಮತ್ತು ಭೋಧಕೇತರ ಸಿಬ್ಬಂದಿಗಳಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರ ಕಾಮತ್ ಸಮುದಾಯ ವೈದ್ಯ ಶಾಸ್ತ್ರ ಮುಖ್ಯಸ್ಥರು, ಡಾ. ವಿಜಯ್ ಕುಮಾರ್, ಅಣು ಜೀವಿ ಶಾಸ್ತ್ರ ಪ್ರಾದ್ಯಾಪಕರು, ಡಾ. ಮಹೇಶ್ ಎಸ್.ಹೆಚ್ ಮತ್ತು ಡಾ. ಶ್ಯಾಮಲ ರವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ. ಕಾರ್ಯಪ್ಪ ಕೆ.ಬಿ., ಸಂಸ್ಥೆಯ ಭೋಧಕ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಜಗದೀಶ್ ಕೆ, ಶೂಶ್ರೂಷಕ ಅಧೀಕ್ಷರಾದ ಮೀನ ಕುಮಾರಿ, ಸಮುದಾಯ ವೈದ್ಯ ಶಾಸ್ತ್ರ ಮುಖ್ಯಸ್ಥರಾದ ಡಾ. ರಾಮಚಂದ್ರ ಕಾಮತ್, ಆಸ್ಪತ್ರೆಯ ವೈದ್ಯರುಗಳು, ಶ್ರೂಶ್ರೂಷಕ ವೃಂದದವರು, ಬೋಧಕೇತರ ಸಿಬ್ಬಂದಿ ಮತ್ತು ವೈದ್ಯ ವಿದ್ಯಾರ್ಥಿಗಳು ಹಾಜರಿದ್ದರು.
ಸಾರ್ವಜನಿಕರು ನಿಫ್ಹಾ ವೈರಾಣು ಜ್ವರ ತಡೆಗಟ್ಟುವ ವಿಧಾನ
1. ಕೈಗಳನ್ನು ಸಂಪೂರ್ಣವಾಗಿ ಶುದ್ದೀಕರಿಸುವುದು.
2. ತಾಜಾ ತಾಳೆ ಹಣ್ಣಿನ ರಸವನ್ನು ಸೇವಿಸಬಾರದು.
3. ಅನಾರೋಗ್ಯದ ಹಂದಿಗಳನ್ನು ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು.
4. ಬಾವಲಿಗಳ ಪ್ರವೇಶವನ್ನು ತಪ್ಪಿಸಲು, ತೆರೆದ ಬಾವಿಗಳಿಗೆ ಜಾಲರಿಯನ್ನು ಅಳವಡಿಸುವುದು.
5. ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು
6. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ/ನೀರಾಗಳನ್ನು ಕುಡಿಯಬಾರದು
7. ಬಾವಲಿಗಳಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು.







