ಹೊನ್ನಾವರ: ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಹೊನ್ನಾವರ,ಮೇ.24: ತಾಲೂಕಿನ ರಾಮತಿರ್ಥ ಸಮೀಪದ ಅರೆಸಾಮಿಕೆರೆಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊರ್ವನ ಶವ ಅನುಮಾನಾಸ್ಪದ ರೀತಿಯಲ್ಲಿ ಗುರುವಾರ ಪತ್ತೆಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಬೆಂಗಳೂರು ಹೊಸಕೋಟೆಯ 10ನೇ ಕ್ರಾಸ್ ರೈಸಿಂಗ್ ಬಡಾವಣೆಯ ನಿವಾಸಿ ಎಚ್.ವಿ ವಿಜಯಕುಮಾರ್ (40) ಎಂದು ಗುರುತಿಸಲಾಗಿದೆ. ಈತನು ಬೆಂಗಳೂರಿನಿಂದ ಆಗಮಿಸಿ ಕಳೆದ ಹತ್ತು ವರ್ಷಗಳಿಂದ ಹೊನ್ನಾವರ ಪಟ್ಟಣದ ರಾಯಲ್‍ಕೇರಿಯಲ್ಲಿ ವಾಸ ಮಾಡುತ್ತಿದ್ದನು.
ತರಕಾರಿ ವ್ಯಾಪಾರ ಹಾಗೂ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಮನೆಯಿಂದ ತನ್ನ ಮೋಟಾರ್ ವಾಹನದ ಮೂಲಕ ಅರೆಸಾಮಿಕೆರೆ ಬಳಿ ಯಾವುದೋ ಕಾರಣಕ್ಕಾಗಿ ಹೊರಟವನು ಕೆರೆಯ ಬಳಿ ಆಕಾಸ್ಮಾತ್ ಬಿದ್ದಿರಬಹುದು ಅಥವಾ ಇನ್ನಾವುದೋ ರೀತಿಯಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಶವ ಅರೆಸಾಮಿ ಕೆರೆಯಲ್ಲಿ ತೇಲುತ್ತಿದ್ದ ಬಗ್ಗೆ ಸ್ಥಳಿಯರು ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ದಾವಿಸಿ ಕೆರೆಯಿಂದ ಶವ ಹೊರತೆಗೆದಿದ್ದಾರೆ. ವ್ಯಕ್ತಿಯ ಸಾವು ಅನುಮಾನಾಸ್ಪದ ರೀತಿಯಲ್ಲಿದ್ದು, ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





