ಕೊಪ್ಪ: ಯುವತಿ ನಾಪತ್ತೆ; ದೂರು ದಾಖಲು
ಕೊಪ್ಪ, ಮೇ 23: ಪಟ್ಟಣದ ಇಂದಿರಾನಗರ ನಿವಾಸಿ ಸಂಧ್ಯಾ(18) ಎಂಬ ಯುವತಿ ಎ.30ರಿಂದ ಕಾಣೆಯಾಗಿರುತ್ತಾಳೆ ಎಂದು ತಂದೆ ಯುವತಿಯ ತಂದೆ ಸುಂದರೇಶ್ ಮಂಗಳವಾರ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಂದರೇಶ್‍ರ ಇಬ್ಬರು ಮಕ್ಕಳಲ್ಲಿ ಹಿರಿಯಳಾದ ಸಂಧ್ಯಾ ಮಾರ್ಚ್ 30ರಂದು ಬೆಳಗ್ಗೆ ಕೊಪ್ಪ ಪಟ್ಟಣಕ್ಕೆ ಟೈಲರಿಂಗ್ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವಳು ವಾಪಸ್ಸು ಬಂದಿಲ್ಲ. ಮನೆಯಿಂದ ಹೋಗುವಾಗ ಯಾವುದೇ ವಸ್ತುವನ್ನಾಗಲಿ, ಮೊಬೈಲನ್ನಾಗಲಿ ತೆಗೆದುಕೊಂಡು ಹೋಗಿಲ್ಲ. ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಳು, ಈವರೆಗೆ ಸಂಬಂಧಿಕರ ಸ್ನೇಹಿತ ಮನೆಗಳಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗದ ಕಾರಣ ದೂರು ನೀಡುತ್ತಿರುವುದಾಗಿ ತಿಳಿಸಿದ್ದು, ಕಾಣೆಯಾದ ಸಂದ್ಯಾಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಆಧಾರದ ಮೇಲೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





