ಹನೂರು : ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು

ಹನೂರು,ಮೇ 25 : ಕಳೆದ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಹನೂರು–ಮಲೈಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಹಾಸು ಪಾಸಿನಲ್ಲಿರುವ ಮರಗಳು ಧರೆಗುರುಳಿರುವುದು ಒಂದಡೇ ಆದರೆ, ಇನ್ನೂ ಹಲವು ಮರಗಳು ಏಕಕಾಲಕ್ಕೆ ಒಣಗಿ, ಹಲವು ಬೃಹತ್ ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಇಲ್ಲಿ ಸಂಚರಿಸುವ ವಾಹನ ಸವಾರರು ,ಹಾಗೂ ಸಾರ್ವಜನಿಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಎಲ್ಲೆಮಾಳ ಗ್ರಾಮಕ್ಕೆ ಸಂಪರ್ಕಿಸುವ ಮಲೈಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಹಾಸು ಪಾಸುಗಳಲ್ಲಿ ಬೃಹತ್ ಆಕಾರದ ಮರಗಳು ವಿಶಾಲವಾಗಿ ಬೆಳೆದಿದ್ದು, , ಇನ್ನೂ ಹಲವು ಮರಗಳು ಒಣಗಿದ್ದು , ಇಂದೂ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ ,ಇಲ್ಲಿ ಪ್ರತಿ ನಿತ್ಯ ಮಲೈಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಈ ಮರಗಳು ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ, ಹಲವು ಕಡೆ ಧರೆಗೆ ಉರುಳಿದೆ.
ಈ ಮರಗಳು ಅಪಾಯದ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖಾಧಿಕಾರಿಗಳಿಗೆ ಹಲವು ಭಾರಿ ಮೌಖಿಕ ದೂರುಗಳನ್ನು ನೀಡಿದರೂ ಅಧಿಕಾರಿಗಳು ತಲೆಕೆಡಿಸಿಕೂಂಡಿಲ್ಲ
ಕಾರ್ತಿಕ್ ಸ್ಥಳೀಯ ನಿವಾಸಿ
ಈಗಾಗಲೇ ಯಾವ ಮರಗಳ ಬೀಳುವ ಹಂತದಲ್ಲಿದೆ ಎಂಬುದನ್ನು ಪಟ್ಟಿ ತಯಾರಿಸಿ ಡಿವಿಸನ್ ಕಚೇರಿಗೆ ಕಳುಹಿಸಲಾಗಿದ್ದು ,ಡಿಎಫ್‍ಓ ಹತ್ತಿರ ಚರ್ಚಿಸಿ ಅತೀ ಶೀಘ್ರದಲ್ಲಿ ಕಟಾವು ಮಾಡುವ, ಪ್ರಕ್ರಿಯೆಯನ್ನು, ಪ್ರಾರಂಬಿಸಲಾಗುವುದು
ವೃಕಿನಾ ಪರ್ವಿನ್ , ವಲಯ ಅರಣ್ಯಾಧಿಕಾರಿಗಳು ಹನೂರು ಬಫರ್ ವಲಯ







