ಉತ್ತರ ಪ್ರದೇಶದಲ್ಲಿ ಬಿಎಸ್ ಪಿ-ಎಸ್ಪಿ ಮೈತ್ರಿ ಬಿಜೆಪಿಗೆ ಸವಾಲಾಗಲಿದೆ: ಒಪ್ಪಿಕೊಂಡ ಅಮಿತ್ ಶಾ

ಹೊಸದಿಲ್ಲಿ, ಮೇ 25: 2019ರಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಹಾಗು ಎಸ್ಪಿ ಮೈತ್ರಿಯು ಬಿಜೆಪಿಗೆ ಸವಾಲಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಆದರೆ ರಾಯ್ ಬರೇಲಿ ಅಥವಾ ಅಮೇಠಿಯಲ್ಲಿ ಬಿಜೆಪಿಯು ಕಾಂಗ್ರೆಸನ್ನು ಮಣಿಸಲಿದೆ ಎಂದವರು ಹೇಳಿದರು.
“ಬಿಎಸ್ ಪಿ ಹಾಗು ಎಸ್ಪಿ ಮೈತ್ರಿಯಾಗಿ ಸ್ಪರ್ಧಿಸಿದರೆ ಅದು ನಮಗೆ ಸವಾಲಾಗಲಿದೆ. ಆದರೆ ಅಮೇಠಿ ಅಥವಾ ರಾಯ್ ಬರೇಲಿಯಲ್ಲಿ ಒಂದು ಸೀಟು ಗೆಲ್ಲುವುದು ಖಚಿತ ಎಂದವರು ಹೇಳಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ಮೈತ್ರಿ ಕಡಿದುಕೊಳ್ಳಲು ಇಚ್ಛಿಸಿಲ್ಲ. ಆದರೆ ಶಿವಸೇನೆ ಬಿಜೆಪಿಯನ್ನು ತೊರೆಯಲು ಬಯಸಿದರೆ ಬಿಜೆಪಿಗೆ ಬೇರೆ ಆಯ್ಕೆಗಳಿಲ್ಲ ಎಂದವರು ಹೇಳಿದರು. “ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗು ಇನ್ನಿತರ ರಾಜ್ಯಗಳಲ್ಲೂ 2019ರಲ್ಲಿ ನಾವು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಬಿಜೆಪಿಯು ಕನಿಷ್ಠ 80 ಸೀಟುಗಳನ್ನು ಗೆಲ್ಲಲಿದೆ’ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
Next Story





