ಮೇ 26: ಅಟ್ಯಾರ್ ಕಣ್ಣೂರಿನಲ್ಲಿ ಕೆಟಿಎಂ ಬೈಕ್ ರೇಸ್
ಮಂಗಳೂರು, ಮೇ 25: ಕೆಟಿಎಂ ಬೈಕ್ ರೇಸಿಂಗ್ ತಂಡದ ವತಿಯಿಂದ ನಗರದ ಅಡ್ಯಾರ್ ಕಣ್ಣೂರು ಕೆಫೆ ಕಾರ್ಟ್‌ನಲ್ಲಿ ಹಮ್ಮಿಕೊಂಡಿರುವ ಆರೆಂಜ್ ಡೇ ಕಾರ್ಯಕ್ರಮದಲ್ಲಿ ಮೇ 26ರಂದು 4 ಗಂಟೆಗೆ ಬೈಕ್ ಸ್ಟಂಟ್ ಹಾಗೂ ಬೈಕ್ ರೇಸ್ ನಡೆಯಲಿದೆ.
ಕಾರ್ಯಕ್ರಮದಲ್ಲಿ ವೃತ್ತಿಪರ ಬೈಕ್ ಸವಾರರು ಬೈಕ್ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ. ಕೆಟಿಎಂ 200 ಡ್ಯೂಕ್ ಮತ್ತು ಕೆಟಿಎಂ ಆರ್‌ಸಿ 200 ಬೈಕ್ ಮಾಲಕರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೆಟಿಎಂ ಬೈಕ್ ಸವಾರರು ಇದುವರೆಗೆ 270ಕ್ಕೂ ಅಧಿಕ ವಿಶ್ವ ಚ್ಯಾಂಪಿಯನ್ ಗೆದ್ದು ಕೊಂಡಿದ್ದಾರೆ.
ಬೈಕ್ ರೇಸ್ ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಭಾಗವಹಿಸಬಹುದಾಗಿದೆ .ಆಸಕ್ತರು 9880077886 ದೂರವಾಣಿ ಸಂಖ್ಯೆಗೆ ಕರ ಮಾಡಿ ಮಾಹಿತಿ ಪಡೆಯಬಹುದಾಗಿದೆ. ವಿಜೇತರಿಗೆ ಬಹುಮಾನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story





