ಎರಡನೇ ಕ್ವಾಲಿಫೈಯರ್: ಹೈದರಾಬಾದ್ 174/7
ಐಪಿಎಲ್ 2018

ಕೋಲ್ಕತಾ, ಮೇ 25: ಐಪಿಎಲ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.
ಟಾಸ್ ಜಯಿಸಿದ ಕೋಲ್ಕತಾ ತಂಡದ ನಾಯಕ ದಿನೇಶ್ ಕಾರ್ತಿಕ್ ಸನ್‌ರೈಸರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
ಸನ್‌ರೈಸರ್ಸ್‌ಗೆ ವೃದ್ಧಿಮಾನ್ ಸಹಾ(35) ಹಾಗೂ ಶಿಖರ್ ಧವನ್(34) ಮೊದಲ ವಿಕೆಟ್‌ಗೆ ಜೊತೆಯಾಟದಲ್ಲಿ 7.1 ಓವರ್‌ಗಳಲ್ಲಿ 54 ರನ್ ಸೇರಿಸಿದರು. ಆದರೆ ಈ ಇಬ್ಬರು ಔಟಾದ ಬಳಿಕ ಸನ್‌ರೈಸರ್ಸ್ ಹಿನ್ನಡೆ ಕಂಡಿತು. ನಾಯಕ ಕೇನ್ ವಿಲಿಯಮ್ಸನ್ ಕೇವಲ 3 ರನ್ ಗಳಿಸಿ ಔಟಾದರು.
ಶಾಕಿಬ್ ಅಲ್ ಹಸನ್(28), ದೀಪಕ್ ಹೂಡಾ(19) ಹಾಗೂ ರಶೀದ್ ಖಾನ್(ಔಟಾಗದೆ 34) ಎರಡಂಕೆಯ ಸ್ಕೋರ್ ದಾಖಲಿಸಿ ತಂಡದ ಮೊತ್ತವನ್ನು 170 ಗಡಿ ದಾಟಿಸಿದರು. ಬೌಲರ್ ರಶೀದ್ ಖಾನ್ ಕೇವಲ 10 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳಿದ್ದ 34 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ರಶೀದ್ ಅವರು ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 2 ಸಿಕ್ಸರ್, 1 ಬೌಂಡರಿ ಸಹಿತ ಒಟ್ಟು 18 ರನ್ ಸಿಡಿಸಿದ್ದಾರೆ.
ಕೆಕೆಆರ್ ಪರ ಸ್ಪಿನ್ನರ್ ಕುಲ್‌ದೀಪ್ ಯಾದವ್(2-29) ಯಶಸ್ವಿ ಬೌಲರ್ ಎನಿಸಿಕೊಂಡರು. ಶಿವಂ ಮಾವಿ(1-33), ಸುನೀಲ್ ನರೇನ್ (1-24) ಹಾಗೂ ಪಿಯೂಷ್ ಚಾವ್ಲಾ(1-22) ತಲಾ ಒಂದು ವಿಕೆಟ್ ಪಡೆದಿದ್ದಾರೆ.







