ಮೇ 27ರಂದು ಸಣ್ಣ ಕಥೆ -ಕವನ ಸ್ಪರ್ಧೆ
ಉಡುಪಿ, ಮೇ 25: ವಿಶ್ವಕರ್ಮ ಒಕ್ಕೂಟದ ವತಿಯಿಂದ ಸಮಾಜ ಬಾಂಧವರಿಗಾಗಿ ಸಣ್ಣ ಕಥೆ-ಕವನ ಸ್ಪರ್ಧೆಯು ಮೇ 27ರಂದು ಪೂರ್ವಾಹ್ನ 9:30 ರಿಂದ 11ಗಂಟೆಯವರೆಗೆ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
35ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಹಾಗು 35ಕ್ಕಿಂತ ಕಡಿಮೆ ವಯೋಮಾನ ದವರಿಗೆ ನಡೆಯುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವೀತಿಯ ಹಾಗು ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗು ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧೆಗೆ ಹಾಜರಾಗುವವರು ವಯಸ್ಸಿನ ಬಗ್ಗೆ ಅಧಿಕೃತ ದಾಖಲೆ ತರಬೇಕೆಂದು ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್.ಸೀತಾರಾಮ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





