ಮೇ 27ರಂದು ಶಿಕ್ಷಣ ಮಾರ್ಗದರ್ಶನ ಶಿಬಿರ
ಉಡುಪಿ, ಮೇ 25: ಉಡುಪಿ ಮತ್ತು ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ವತಿಯಿಂದ ಶಿಕ್ಷಣ ಮಾರ್ಗದರ್ಶನ ಶಿಬಿರವು ಮೇ 27ರಂದು ಪೂರ್ವಾಹ್ನ 9:30ಕ್ಕೆಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮಾರ್ಗ ದರ್ಶನ ನೀಡಲಿದ್ದಾರೆ. ವಿಶ್ವಕರ್ಮ ಸಮಾಜದ ಎಸ್‌ಎಸ್‌ಎಲ್ಸಿ ಹಾಗು ಪಿಯುಸಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಬಿರದಲ್ಲಿ ಭಾಗವಹಿಸ ಬೇಕೆಂದು ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್.ಸೀತಾರಾಮ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





