12ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಹೊಸದಿಲ್ಲಿ, ಮೇ 25: ತೈಲ ಬೆಲೆ 12 ದಿನವಾದ ಶುಕ್ರವಾರ ಕೂಡ ಏರಿಕೆಯಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 32 ಪೈಸೆ ಹಾಗೂ 18 ಪೈಸೆ ಏರಿಕೆಯಾಗಿದೆ.
ಪರಿಷ್ಕೃತ ಪೆಟ್ರೋಲ್ ಬೆಲೆ ಮಹಾನಗರಗಳಾದ ದಿಲ್ಲಿಯಲ್ಲಿ ಲೀಟರ್‌ಗೆ ರೂ. 77.83, ಮುಂಬೈಯಲ್ಲಿ ಲೀಟರ್‌ಗೆ ರೂ. 85.65, ಕೋಲ್ಕತ್ತಾದಲ್ಲಿ ಲೀಟರ್‌ಗೆ ರೂ. 80.47 ಹಾಗೂ ಚೆನ್ನೈಯಲ್ಲಿ ಲೀಟರ್‌ಗೆ ರೂ. 80.80 ಏರಿಕೆಯಾಗಿದೆ. ಅದೇ ರೀತಿ ಡೀಸೆಲ್‌ಗೆ ದಿಲ್ಲಿಯಲ್ಲಿ ಲೀಟರ್‌ಗೆ ರೂ. 68.75, ಮುಂಬೈಯಲ್ಲಿ ಲೀಟರ್‌ಗೆ ರೂ. 73.20, ಚೆನ್ನೈಯಲ್ಲಿ ಲೀಟರ್‌ಗೆ ರೂ. 72.58, ಕೋಲ್ಕತ್ತಾದಲ್ಲಿ ಲೀಟರ್‌ಗೆ ರೂ. 71.30 ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಅಲ್ಲದೆ, ಅಮೆರಿಕ ಡಾಲರ್ ಎದುರು ರೂಪಾಯಿ ವೌಲ್ಯ ಇಳಿಕೆಯಾಗಿದ್ದು, ಡಾಲರ್ ರೂಪಾಯಿ ವಿನಿಮಯ ದರದ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದ ತೈಲ ಬೆಲೆ ಮೇಲೆ ಇನ್ನಷ್ಟು ಹೊರೆ ಬಿದ್ದಿದೆ.
Next Story





