ಎಚ್-4 ವೀಸಾದಾರರಿಗೆ ಕೆಲಸ ನಿರಾಕರಣೆ ಪ್ರಸ್ತಾಪ ಅಂತಿಮ ಹಂತದಲ್ಲಿ
ನ್ಯಾಯಾಲಯಕ್ಕೆ ಟ್ರಂಪ್ ಆಡಳಿತ ಮಾಹಿತಿ

ವಾಶಿಂಗ್ಟನ್, ಮೇ 26: ಎಚ್-4 ವೀಸಾ ಹೊಂದಿರುವವರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೀಡಲಾಗಿರುವ ಪರವಾನಿಗೆಯನ್ನು ಹಿಂದಕ್ಕೆ ಪಡೆಯುವ ಪ್ರಸ್ತಾಪವು ಅಂತಿಮ ಹಂತದಲ್ಲಿದೆ ಎಂದು ಟ್ರಂಪ್ ಆಡಳಿತ ಅಮೆರಿಕದ ನ್ಯಾಯಾಲಯವೊಂದಕ್ಕೆ ಹೇಳಿದೆ.
ಈ ನಿರ್ಧಾರವು ಸಾವಿರಾರು ಭಾರತೀಯರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.
ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿ ಕುಶಲ ಕೆಲಸಗಾರರಿಗೆ ಎಚ್-1ಬಿ ವೀಸಾಗಳನ್ನು ನೀಡಲಾಗುತ್ತಿದ್ದು, ಅವರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ. ಎಚ್-1ಬಿ ವೀಸಾಗಳನ್ನು ಪಡೆದಿರುವ ಹೆಚ್ಚಿನವರು ಭಾರತೀಯರು.
ಎಚ್-1ಬಿ ವೀಸಾಗಳನ್ನು ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ನೀಡುವ ಒಬಾಮ ಆಡಳಿತದ ನೀತಿಯನ್ನು ರದ್ದುಗೊಳಿಸಲು ಪ್ರಸಕ್ತ ಟ್ರಂಪ್ ಆಡಳಿತ ನಿರ್ಧರಿಸಿದೆ.
ಪ್ರಸ್ತಾಪಿತ ಕಾನೂನು ಅಂತಿಮ ಹಂತದಲ್ಲಿದೆ ಎಂದು ಆಂತರಿಕ ಭದ್ರತೆ ಇಲಾಖೆಯು ಫೆಡರಲ್ ನ್ಯಾಯಾಲಯವೊಂದಕ್ಕೆ ತಿಳಿಸಿದೆ.
Next Story





