ಅತ್ಯಾಚಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು: ಆರೋಪ
ಬೆಂಗಳೂರು, ಮೇ 26: ಅತಿಥಿ ಗೃಹದಲ್ಲಿದ್ದ ಯುವತಿ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದು, ಈಸಂಬಂಧ ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರೂ, ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯ ದೀಪಾಂಜಲಿ ನಗರದಲ್ಲಿರುವ ಅನ್ನಪೂರ್ಣ ಅತಿಥಿ ಗೃಹದಲ್ಲಿ(ಪಿಜಿ) ಪರಿಚಯಸ್ಥನಾದ ಕಾರ್ತಿಕ್ ಎಂಬಾತ ಸೇರಿ ಇಬ್ಬರು ಅತ್ಯಾಚಾರ ನಡೆಸಿ ಆ ದೃಶ್ಯವನ್ನು ಚಿತ್ರೀಕರಣ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಈ ಕೃತ್ಯಕ್ಕೆ ಅತಿಥಿ ಗೃಹದ ಮುಖ್ಯಸ್ಥ ಸಹಕರಿಸಿದ್ದಾರೆ. ಈ ಕುರಿತಂತೆ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಆರೋಪಿಗಳ ಪರವಾಗಿ ನಿಂತು ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಯುವತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ತಿಕ್ ಮತ್ತು ಆತನ ಸ್ನೇಹಿತರು ನನ್ನ ಕೊಠಡಿಗೆ ನುಗ್ಗಿ, ಔಷಧಿಯಿಂದ ನನ್ನ ಜ್ಞಾನ ತಪ್ಪಿಸಿ ಅತ್ಯಾಚಾರವೆಸಗಿದ್ದಾರೆ. ಮಾತ್ರವಲ್ಲ, ಅತ್ಯಾಚಾರದ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ನೀನು ನಾವು ಹೇಳಿದಂತೆ ಕೇಳಬೇಕು. ನಾವು ತೋರಿಸುವ ಯುವಕರೊಂದಿಗೆ ಸಹಕರಿಸಬೇಕು. ಇಲ್ಲದಿದ್ದರೆ, ಅತ್ಯಾಚಾರದ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಯುವತಿ ಅಳಲು ತೋಡಿಕೊಂಡಿದ್ದಾಳೆ.





