ಮೌಂಟ್ ಕಾರ್ಮೆಲ್ ಸ್ಕೂಲ್‌ಗೆ ಶೇ.100 ಫಲಿತಾಂಶ

ಮಂಗಳೂರು, ಮೇ 26: ನಗರದ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಸಿಬಿಎಸ್‌ಸಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ ಶಾಲೆಯ 21 ವಿದ್ಯಾರ್ಥಿಗಳ ಪೈಕಿ ಐವರು ಡಿಸ್ಟಿಂಕ್ಷನ್ ಮತ್ತು 16 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿ ಲೀಂಡರ್ ಸ್ಟೀಫನ್ ಡಿಸೋಜ 500ರಲ್ಲಿ 466 ಅಂಕ ಪಡೆದು ಶೇ. 93.2 ಮತ್ತು ಸೈಮನ್ ಲೆಟಿಟ್ಟಾ ಪಿಂಟೋ 462 ಅಂಕ ಪಡೆದು ಶೇ.92.4 ಫಲಿತಾಂಶ ದಾಖಲಿಸಿದ್ದಾರೆ. ಉಳಿದಂತೆ ಸಿದ್ದನಾಥ್ ಕಾಮತ್, ಕ್ರಿಸ್ ಅರ್ಲಿನ್ ಕಾರ್ಡೆಝಾ, ನೀಲ್ ಇ ಲಸ್ರಾದೋ ತಲಾ ಶೇ.85 ಫಲಿತಾಂಶ ದಾಖಲಿಸಿದ್ದಾರೆ.
Next Story





