ಮಂಗಳೂರು; ಸನಾತನ ಹಿಂದೂ ಜನ ಜಾಗೃತಿ ಸಮಿತಿಯಿಂದ ಜಾಥ
ಮಂಗಳೂರು, ಮೇ 26: ಸನಾತನ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಸಂಸ್ಥೆಯ ಸಂಸ್ಥಾಪನಾ ದಿನದ ಪ್ರಯುಕ್ತ ನಗರದ ಬಲ್ಮಠ ದಿಂದ ಲಾಲ್ ಭಾಗ್ ವರೆಗಿನ ಮುಖ್ಯ ರಸ್ತೆಯಲ್ಲಿ ಜನ ಜಾಗೃತಿ ಜಾಥ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ನಡೆಯಿತು.
ಡಾ.ಜಯವಂತ ಅಠವಲೆಯವರ ಮೂಲಕ ಸ್ಥಾಪನೆಯಾದ ಸನಾತನ ಹಿಂದು ಜನ ಜಾಗೃತಿ ಸಮಿತಿಯ ಜಾಥದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ, ಗೋ ರಕ್ಷಣೆ, ಹಿಂದೂ ರಾಷ್ಟ್ರ ನಿರ್ಮಾಣ, ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಲಾಯಿತು.
ಛತ್ರ ಪತಿ ಶಿವಾಜಿ ಮಹಾರಾಜ, ಶ್ರೀರಾಮಚಂದ್ರ ಪರವಾಗಿ ಘೋಷಣೆ ಯೊಂದಿಗೆ, ಪೌರಾಣಿಕ ಟ್ಯಾಬ್ಲೋ ವಾಹನ ಮೆರವಣಿಗೆ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ನಡೆಯಿತು.
Next Story





