ಸಿಬಿಎಸ್ಇ ಫಲಿತಾಂಶ: ಮಣಿಪಾಲ ಮಾಧವಕೃಪಾಗೆ ಶೇ.100 ಫಲಿತಾಂಶ

ಆರತಿ, ಸಾನಿಯಾ
ಮಣಿಪಾಲ, ಮೇ 26: ಇಂದು ಪ್ರಕಟಗೊಂಡ ಸಿಬಿಎಸ್ಇ 12ನೇ ತರಗತಿ ಫಲಿತಾಂಶದಲ್ಲಿ ಮಣಿಪಾಲದ ಮಾಧವಕೃಪಾ ಶಾಲೆ ಶೇ.100 ಫಲಿತಾಂಶವನ್ನು ದಾಖಲಿಸಿದೆ ಎಂದು ಶಾಲೆಯ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಾಲೆಯಿಂದ ಪರೀಕ್ಷೆ ಬರೆದ ಸಾಯನ್ಸ್ ಮತ್ತು ಕಾಮರ್ಸ್ ವಿಭಾಗದ 22 ಬಾಲಕರು ಹಾಗೂ 32 ಬಾಲಕಿಯರೆಲ್ಲರೂ ತೇರ್ಗಡೆಗೊಂಡಿದ್ದಾರೆ.54 ವಿದ್ಯಾರ್ಥಿಗಳಲ್ಲಿ 18 ಮಂದಿ ಶೇ.90ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದರೆ, 27 ಮಂದಿ ಶೇ.80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಆರತಿ ಶೇ.96.20 (481) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಕಾಮರ್ಸ್ ವಿಭಾಗದಲ್ಲಿ ಶೇ.92.40 (462) ಅಂಕ ಗಳಿಸಿದ ಸಾನಿಯಾ ಮನ್ನಾ ಅಗ್ರಸ್ಥಾನಿಯಾಗಿದ್ದಾರೆ. ಸಾನಿಯಾ ಮನ್ನಾ ಉಡುಪಿ ನಾಯರ್ ಕೆರೆಯ ಇಕ್ಬಾಲ್ ಮನ್ನಾ ಮತ್ತು ರಮೀಝಾ ರಹ್ಮತ್ ದಂಪತಿಯ ಪುತ್ರಿ ಎಂದು ಪ್ರಕಟನೆ ತಿಳಿಸಿದೆ.
Next Story





