ಉಳ್ಳಾಲ: ಯುವಕ ನಾಪತ್ತೆ

ಉಳ್ಳಾಲ, ಮೇ 26: ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚೇರಿಯ ಕಿಲೇರಿಯಾ ನಗರದ ನಿವಾಸಿ ಮುಹಮ್ಮದ್ ನಸೀಮ್ (35) ಕಾಣೆಯಾದ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಸೀಮ್ ಎ.17ರಂದು ರಾತ್ರಿ 8.30ಕ್ಕೆ ಮನೆಯಿಂದ ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯವರಲ್ಲಿ ತಿಳಿಸಿ ಹೋಗಿದ್ದರು. ನಸೀಮ್‌ರವರ ತಂದೆ ಮುಹಮ್ಮದ್ ಇನಾಯತ್ ದೆಹಲಿಯಲ್ಲಿ ವಾಸವಾಗಿದ್ದು, ನಸೀಮ್ ಬೆಂಗಳೂರಿಗೂ ಹೋಗದೆ ದೆಹಲಿಗೂ ತೆರಳದೆ ಮತ್ತು ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಮನೆಯವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





