ಬೈಕ್ ಕಳವು
ಮಂಗಳೂರು, ಮೇ 26: ನಗರದ ಬೋಳಾರ ಸಮೀಪದ ಶಾದಿ ಮಹಲ್ ಬಳಿಯಿರುವ ಮಿಡೋಸ್ ಅಪಾರ್ಟ್‌ಮೆಂಟಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೋಳಾರ ನಿವಾಸಿ ಅಹ್ಮದ್ ಎ.2ರಂದು ರಾತ್ರಿ 9:30ಕ್ಕೆ ತನ್ನ ವಾಸ್ತವ್ಯದ ಫ್ಲಾಟ್ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿದ್ದರು. ಮರುದಿನ ಬೆಳಗ್ಗೆ 5ಗಂಟೆಗೆ ನೋಡುವಾಗ ಬೈಕ್ ಕಳವಾಗಿತ್ತು. ಬೈಕ್‌ನ ದಾಖಲೆಗಳು ಬೈಕ್‌ನೊಂದಿಗೆ ಕಳವಾಗಿತ್ತು. ನಗರದ ವಿವಿಧೆಡೆ ಹುಡುಕಾಡಿದರೂ ಬೈಕ್ ಪತ್ತೆಯಾಗದ ಕಾರಣ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ. ಬೈಕ್‌ನ ಮೌಲ್ಯ 48 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Next Story





