ಮತದಾರರ ಚೀಟಿ ಪತ್ತೆ ಪ್ರಕರಣ: ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಸೂಚನೆ
ಬೆಂಗಳೂರು, ಮೇ 26: ಜಾಲಹಳ್ಳಿಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ ಸಂಬಂಧ ಇನ್ನಿತರೆ ಸೆಕ್ಷನ್‌ಗಳನ್ನು ಸೇರಿಸಿ ಮೊಕದ್ದಮೆ ದಾಖಲು ಮಾಡುವಂತೆ ನಗರದ 6ನೆ ಎಸಿಎಂಎಂ ನ್ಯಾಯಾಲಯ ಸೂಚಿಸಿದೆ ಎನ್ನಲಾಗಿದೆ.
ಪ್ರಕರಣ ಸಂಬಂಧ 54ರಡಿ ಐಪಿಸಿ ಸೆಕ್ಷನ್ 420, 465, 468, 471, 171ಎಫ್ ಸೇರ್ಪಡೆ ಮಾಡುವಂತೆ ಪೊಲೀಸರು ನ್ಯಾಯಾಲಯ ನಿರ್ದೇಶನ ನೀಡಿದೆ. ಮೇ 8ರಂದು ಜಾಲಹಳ್ಳಿ ಅಪಾರ್ಟಮೆಂಟ್‌ನಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತಯಾಗಿದ್ದವು. ಈ ಸಂಬಂಧ ರಾಕೇಶ್ ಎಂಬಾತ ದೂರು ನೀಡಿದ್ದರು. ಆದರೆ ಪೊಲೀಸರು ಜಾಮೀನು ಪಡೆಯಬಹುದಾದ ಸೆಕ್ಷನ್ ಹಾಕಿರುವ ಬಗ್ಗೆ ಆಕ್ಷೇಪಿಸಿ, ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
ದೂರಿನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಮುನಿರತ್ನ ಹೆಸರು ಪ್ರಸ್ತಾಪ ಮಾಡಿದ್ದ ರಾಕೇಶ್, ದೂರು ಆಲಿಸಿ ಮತ್ತೆ ಕೆಲವು ಸೆಕ್ಷನ್‌ಗಳ ಸೇರ್ಪಡೆಗೆ ನ್ಯಾಯಾಲಯ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
Next Story





