ವಾಹನ ಕಳವು ಜಾಲ ಪತ್ತೆ: 7 ಮಂದಿ ಅಪ್ರಾಪ್ತರ ಸೆರೆ; ನಾಲ್ಕು ವಾಹನಗಳ ವಶ

ಮಂಗಳೂರು, ಮೇ 26: ನಗರ ಮತ್ತು ಹೊರವಲಯದಲ್ಲಿ ಬೈಕ್ ಹಾಗೂ ಕಾರುಗಳನ್ನು ಕಳವು ಮಾಡುತ್ತಿದ್ದ ಜಾಲವೊಂದನ್ನು ಬಂದರು ಠಾಣೆಯ ಪೊಲೀಸರು ಪತ್ತೆ ಹಚ್ಚಿ 7 ಮಂದಿಯನ್ನು ಬಂಧಿಸಿದ್ದಾರೆ.
ಈ ಜಾಲದಲ್ಲಿ 9 ಮಂದಿ ಇದ್ದಾರೆ ಎನ್ನಲಾಗಿದೆ. ಬಂಧಿತ 7 ಮಂದಿ ಕೂಡಾ ಅಪ್ರಾಪ್ತರು ಎಂದು ತಿಳಿದುಬಂದಿದೆ. ಆರೋಪಿಗಳು ಸುಮಾರು 20 ಬೈಕ್ ಹಾಗೂ 2 ಕಾರುಗಳನ್ನು ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪೈಕಿ 3 ಬೈಕ್ ಹಾಗೂ 1 ಕಾರನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಉಳಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.
ಸುಮಾರು 3-4 ತಿಂಗಳಿನಲ್ಲಿ ಮಂಗಳೂರಿನಲ್ಲಿ 25ಕ್ಕೂ ಅಧಿಕ ಬೈಕ್ ಹಾಗೂ ಕಾರುಗಳು ಕಳವಾಗಿತ್ತು. ಇದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಅದರಂತೆ ಬಂದರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಹಾಗೇ ಶನಿವಾರ 7 ಮಂದಿ ಅಪ್ರಾಪ್ತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





