ಮಾಸ್ತಿ ಕಥಾ, ಕಾದಂಬರಿ ಪುರಸ್ಕಾರದ ಸ್ಪರ್ಧೆಯ ಫಲಿತಾಂಶ ಬಿಡುಗಡೆ
ಬೆಂಗಳೂರು, ಮೇ 26: ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 127 ನೆ ಸ್ಮರಣೆ ಅಂಗವಾಗಿ ಆಯೋಜಿಸಿದ್ದ 2018 ನೆ ಸಾಲಿನ ಮಾಸ್ತಿ ಕಥಾ ಮತ್ತು ಕಾದಂಬರಿ ಪುರಸ್ಕಾರದ ಸ್ಪರ್ಧೆಯ ಫಲಿತಾಂಶ ಬಿಡುಗಡೆ ಮಾಡಲಾಗಿದೆ.
ಮಾಸ್ತಿ ಕಥಾ ಪುಸ್ತಕ ಪುರಸ್ಕಾರಕ್ಕೆ 30 ಸಂಕಲನಗಳು ಬಂದಿದ್ದು, ಎಸ್.ಎನ್.ಸೇತುರಾಮ್ ಅವರ ನಾವಲ್ಲ ಕೃತಿ ಆಯ್ಕೆಯಾಗಿದೆ. ಹಾಗೂ ಲೇಖಕರೇ ಅದರ ಪ್ರಕಾಶಕರಾಗಿದ್ದಾರೆ. 25 ಸಾವಿರ ಪುರಸ್ಕಾರದ ಮೊತ್ತ ಹಾಗೂ 10 ಸಾವಿರ ಪ್ರಕಾಶಕರ ಮೊತ್ತವಾಗಿದೆ.
ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ನಿವೇದಿತ ಪ್ರಕಾಶನ ಪ್ರಕಟಿಸಿರುವ ಚೀಮನಹಳ್ಳಿ ರಮೇಶ್ ಬಾಬು ಅವರ ಟೈರ್ಸಾಮಿ ಹಾಗೂ ತೇಜಸ್ವಿನಿ ಹೆಗಡೆ(ಲೇಖಕಿಯೇ ಪ್ರಕಾಶಕರಾಗಿದ್ದಾರೆ) ಅವರ ಹಂಸಯಾನ ಕೃತಿ ಆಯ್ಕೆಯಾಗಿದೆ. ಕಾದಂಬರಿಗೆ 25 ಸಾವಿರ ಹಾಗೂ ಪ್ರಕಾಶಕರಿಗೆ 10 ಸಾವಿರ ಪುರಸ್ಕಾರದ ಮೊತ್ತ ನೀಡಲಾಗುತ್ತಿದೆ. ಪುರಸ್ಕಾರವನ್ನು ಜೂನ್ ಅಥವಾ ಜುಲೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





