ಹನೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ

ಹನೂರು,ಮೇ.26: ಬಂಡಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮ ಬುದ್ದ ಯುವಕರ ಸಂಘದ ಸಂಯುಕ್ತಾಶ್ರಯಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಕೆಂಪರಾಜು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಆರೋಗ್ಯ ತಪಾಸಣೆ ಮಾಡಿದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಹಮ್ಮಿಕೂಳ್ಳುವ ತಪಾಸಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಭಾಗವಹಿಸಬೆಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಶಿವರಾಜು, ಸಪ್ತಗಿರಿ ವಿದ್ಯಾಲಯದ ನಿರುತ ವೈದರು ನಾಗ ಶಂಕರ ಚಾರಿಟ್ರಬಲ್ ಟ್ರಸ್ಟ್ ,ರೋಟರಿ ಕಾಸ್ಮೋಪಾಲಿಟನ್ ಕ್ಲಬ್, ನಿತಿನ್ ಹೈ ವಿಜನ್ ಸ್ಟ್ರಿಂಗ್ ಬೆಂಗಳೂರು ಪದಾಧಿಕರಿಗಳು ಮತ್ತು ಬಂಡಳ್ಳಿ ಗ್ರಾಮದ ಗೌತಮಬುದ್ದ ಯುವಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Next Story





