ಸಮಸ್ಯೆ ಪರಿಹರಿಸುವಲ್ಲಿ ಮೋದಿ ವಿಫಲ: ರಾಹುಲ್ ಗಾಂಧಿ

ಹೊಸದಿಲ್ಲಿ, ಮೇ 26: ಸಂಕೀರ್ಣ ಸಮಸ್ಯೆಗಳಲ್ಲಿ ಪೇಚಾಡುವ ವಿದ್ಯಾರ್ಥಿಯಂತೆ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿಯ ನಾಲ್ಕು ವರ್ಷಗಳ ಆಡಳಿತ ರಿಪೋರ್ಟ್ ಕಾರ್ಡ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ಕೃಷಿ, ವಿದೇಶಿ ನೀತಿ, ತೈಲ ಬೆಲೆ ಹಾಗೂ ಉದ್ಯೋಗ ಸೃಷ್ಟಿಯ ನಾಲ್ಕು ಮಾನದಂಡಗಳಲ್ಲಿ ‘ಎಫ್’ ಶ್ರೇಣಿ ನೀಡಿದ್ದಾರೆ. ಮೋದಿ ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸಿರುವ ಅವರು, ಮೋದಿ ಅವರನ್ನು ಅಲ್ಪಾವಧಿಯಲ್ಲಿ ಜನರ ಗಮನ ಸೆಳೆದ ನಿಸ್ಸೀಮ ಮಾತುಗಾರ ಎಂದಿದ್ದಾರೆ. ಸರಕಾರದ ಟೀಕೆಯ ಒಂದು ಭಾಗವಾಗಿ ರಾಹುಲ್ ಗಾಂಧಿ, ಪ್ರಧಾನಿ ಅವರ ಭಾಷಣ ಹಾಗೂ ಯೋಗದ ಬಗೆಗಿನ ಅವರ ಆಕರ್ಷಣೆ ಬಗ್ಗೆ ಟೀಕಿಸಿದ್ದಾರೆ.
Next Story





