ಬೆಂಗಳೂರು: ಜೂ.1ರಂದು ರಂಗರಾಜು ನಾಗವಾರರ ಕೃತಿಗಳ ಬಿಡುಗಡೆ
ಬೆಂಗಳೂರು, ವೆುೀ 27: ರಂಗರಾಜು ನಾಗವಾರ ರಚಿಸಿರುವ ‘ನಾನೂ ಕಂಡ ಅಮೆರಿಕ’ ಹಾಗೂ ‘ಪ್ರೀತಿ.. ಪ್ರೀತಿಯ ರೀತಿ’ ಕೃತಿಗಳ ಬಿಡುಗಡೆ ಸಮಾರಂಭವನ್ನು ಜೂ.1ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಜರಗನಹಳ್ಳಿ ಶಿವಶಂಕರ್ ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದು, ಕವಿ ಡಾ.ದೊಡ್ಡರಂಗೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಎಸ್‌ಬಿಡಿಬಿ ವ್ಯವಸ್ಥಾಪಕ ನಿರ್ದೇಶಕ ವಿ.ಯಶವಂತ್, ಕನ್ನಡ ಪರ ಚಿಂತಕ ರಾ.ನಂ. ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟನೆ ತಿಳಿಸಿದೆ.
Next Story





