ಅರೆ ಸ್ವಯಂಚಾಲಿತ ಹೂಮಾಲೆ ನೇಯುವ ಯಂತ್ರ

ಶಿರ್ವ, ಮೇ 27: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಅರೆ ಸ್ವಯಂಚಾಲಿತ ಹೂಮಾಲೆ ನೇಯುವ ಯಂತ್ರವನ್ನು ಅಭಿವೃದ್ಧಿಪಡಿಸಿ ದ್ದಾರೆ.
ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾ ಪಕ ಸುಧೀರ್ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅದೃತ, ಅಕ್ಷಿತ್ ಕುಮಾರ್, ಅಮೃತ್ ಶೆಟ್ಟಿ ಹಾಗೂ ಬಾಲಕೃಷ್ಣ ಶೆಟ್ಟಿ ಅವರ ತಂಡ ಈ ಸಾಧನೆ ಮಾಡಿದೆ.
ಹೂಮಾಲೆ ನೇಯುವುದು ಕೌಶಲ್ಯದ ಕೆಲಸಗಾರರ ಅಗತ್ಯವಿರುವ ಕೆಲಸ. ಪ್ರಸ್ತುತ ತಲೆಮಾರು ಹೂಮಾಲೆಯ ನೇಯ್ಗೆಯ ಕಡೆಗೆ ಹೆಚ್ಚಿನ ಗಮನ ಕೊಡುತ್ತಿಲ್ಲ. ಹಾರದ ನೇಯ್ಗೆಯ ಪ್ರಕ್ರಿಯೆಯಲ್ಲಿ ಸಂಕೀರ್ಣತೆಯನ್ನು ಕಡಿಮೆ ಮಾಡಲು ಈ ನೇಯ್ಗೆ ಪ್ರಕ್ರಿಯೆಯನ್ನು ಸ್ವಯಂಚಾಲನೆಗೊಳಿಸುವ ಒಂದು ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಮೂಲ ಮಾದರಿಯನ್ನು ಸರಳ ಮತ್ತು ಸುಲಭವಾಗಿ ಲಭ್ಯವಿರುವ ಅಂಶ ಗಳಿಂದ ಮಾಡಲ್ಪಟ್ಟಿದೆ ಮತ್ತು ಈ ಯಂತ್ರವನ್ನು ಬಳಸಲು ಪರಿಣಿತರ ಅಗತ್ಯ ವಿರುವುದಿಲ್ಲ. ಹೂ ಪೂರೈಕೆ ವಿಧಾನವನ್ನು ಸ್ವಯಂಚಾಲಿತಗೊಳಿಸಲು ಈ ಮೂಲ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು ಮತ್ತು ಹೆಚ್ಚಿನ ವೇಗದಲ್ಲಿ ಹೂಮಾಲೆಗನ್ನು ನೆಯ್ಯುವಂತೆ ಮಾಡಬಹುದು.





