ಗರಡಿಮಜಲು :ಯೋಗ ತರಬೇತಿ ಶಿಬಿರ ಉದ್ಘಾಟನೆ

ಮಲ್ಪೆ, ಮೇ 27: ಗರಡಿಮಜಲು ಶ್ರೀವೀರಮಾರುತಿ ಭಜನಾ ಮಂದಿರ, ಬಿಲ್ಲವರ ಸೇವಾ ಸಂಘ ಇದರ ಮಾತೃಮಂಡಳಿ ವತಿಯಿಂದ ಸಾರ್ವಜನಿಕರಿಗೆ ಉಚಿತ ಯೋಗ ಶಿಬಿರವನ್ನು ಇತ್ತೀಚೆಗೆ ಭಜನಾ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ ಉದ್ಘಾಟಿಸಿದರು. ಉಡುಪಿ ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಯೋಗಗುರು ಪಿ.ವಿ.ಭಟ್ ಯೋಗಾಭ್ಯಸಗಳ ಪ್ರಾಮುಖ್ಯತೆ ಹಾಗೂ ಅವಶ್ಯಕತೆಗಳ ಕುರಿತು ಮಾಹಿತಿ ನೀಡಿದರು.
ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಜಯಕುಮಾರ್ ಬೆಳ್ಕಳೆ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಭಜನಾ ಸಂಚಾಲಕ ಸುಂದರ್ ಜತ್ತನ್ನ್, ಮಾತೃ ಮಂಡಳಿ ಅಧ್ಯಕ್ಷೆ ಹೇಮಾ ಸುವರ್ಣ, ಕಾರ್ಯದರ್ಶಿ ಶಾಂತ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 40 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದರು.
Next Story





