ಸೇನಾ ವಾಹನ ಮಗುಚಿ 19 ಯೋಧರಿಗೆ ಗಾಯ

ಶ್ರೀನಗರ, ಮೇ 27: ಶ್ರೀನಗರದಲ್ಲಿ ರವಿವಾರ ಸಿಆರ್‌ಪಿಎಫ್‌ನ ವಾಹನ ಮಗುಚಿದ ಪರಿಣಾಮ 19 ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರೆ ಸೇನಾ ಪಡೆಯ ಬೆಮಿನಾ ಕೇಂದ್ರ ಕಚೇರಿಯ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಬಳಿಕ ಸಿಆರ್‌ಪಿಎಫ್ ವಾಹನ ಮಗುಚಿತು ಎಂದು ಅವರು ತಿಳಿಸಿದ್ದಾರೆ. ಮೂರು ಬೆಂಗಾವಲು ವಾಹನಗಳಲ್ಲಿ ಒಂದಾಗಿದ್ದ ಈ ವಾಹನದಲ್ಲಿ 21 ಮಂದಿ ಯೋಧರಿದ್ದರು. 19 ಮಂದಿ ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡವ ರನ್ನು ಸಮೀಪದ ಜೆವಿಸಿ ಆಸ್ಪತ್ರೆಯಲ್ಲಿ ಹಾಗೂ ಸೇನಾ ನೆಲೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





