‘ವರ್ಷದ ಸರ್ವಜ್ಞ ಪ್ರಶಸ್ತಿ’ಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 27: ಕರ್ನಾಟಕ ಹೆಮ್ಮೆಯ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯಿಂದ ನೀಡುವ ‘ವರ್ಷದ ಸರ್ವಜ್ಞ ಪ್ರಶಸ್ತಿ’ಗೆ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಶೇ.90ಕ್ಕಿಂತ ಅಧಿಕ ಅಂಕಪಡೆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ನಕಲು ಪ್ರತಿ, ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಪೋಟೊ, ತಮ್ಮ ಸ್ವವಿವರವನ್ನು ತಮ್ಮ ಶಾಲೆಯ ಮುಖ್ಯೋಪಾಧ್ಯಾಯ ಅಥವಾ ಪ್ರಾಂಶುಪಾಲರ ಮೂಲಕ ಜೂ.10ರೊಳಗೆ ವೇದಿಕೆಗೆ ಕಳುಹಿಸಿಕೊಡಬಹುದಾಗಿದೆ.
ವಿಳಾಸ: ಎಚ್.ಸಿ.ಕೃಷ್ಣಪ್ಪ, ಸಂಸ್ಥಾಪಕ ಕಾರ್ಯಾಧ್ಯಕ್ಷ, ಕರ್ನಾಟಕ ಹೆಮ್ಮೆಯ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ, ನಂ.1023/43, 3ನೇ ಮಹಡಿ, 4ನೇ ಅಡ್ಡರಸ್ತೆ, ಗೋಕುಲ ಮೊದಲ ಹಂತ, 2ನೇ ಫೇ, ಮತ್ತಿಕೆರೆ, ಬೆಂಗಳೂರು-560054. ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ: 92421 41151/ 9738125494 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





