2018-19ರಲ್ಲಿ 50,000 ಕೋ.ರೂ.ವಹಿವಾಟು ಸಾಧನೆ: ಅಮುಲ್ ಗುರಿ

ಮುಂಬೈ,ಮೇ 27: ಸಹಕಾರಿ ಹೈನೋದ್ಯಮ ಅಮುಲ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.20ರಷ್ಟು ಬೆಳವಣಿಗೆಯನ್ನು ದಾಖಲಿಸುವ ಮತ್ತು ಸಮೂಹದ ವಹಿವಾಟನ್ನು 50,000 ಕೋ.ರೂ.ಗಳಿಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಕಳೆದ ಹಣಕಾಸು ವರ್ಷದಲ್ಲಿ 40,000 ಕೋ.ರೂ.ಗಳ ವಹಿವಾಟು ನಡೆಸಿದ್ದ ಅಮುಲ್ ಬ್ರಾಂಡ್ ಈ ವರ್ಷ ಶೇ.20ರಷ್ಟು ಬೆಳವಣಿಗೆಯನ್ನು ಸಾಧಿಸಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಆಡಳಿತ ನಿರ್ದೇಶಕ ಆರ್.ಎಸ್.ಸೋಧಿ ಅವರು ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು. ಒಕ್ಕೂಟವು ಅಮುಲ್ ಬ್ರಾಂಡ್‌ನಡಿ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಅಮುಲ್ ಬ್ರಾಂಡ್ ಒಕ್ಕೂಟದ 18 ಸದಸ್ಯ ಡೇರಿಗಳನ್ನು ಒಳಗೊಂಡಿದೆ.
Next Story





